August 25, 2026
kranthikidi.com
ಕ್ರೀಡೆತಾಜಾಸುದ್ದಿ

ಬಾಂಗ್ಲಾದಿಂದ ಇತಿಹಾಸ ಸೃಷ್ಟಿ; ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ಆಸ್ಟ್ರೇಲಿಯಾ : ಆಸ್ಟ್ರೇಲಿಯಾ ನೆಲದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 9 ವಿಕೆಟ್‌ಗಳ ಅಮೋಘ ಜಯ ದಾಖಲಿಸಿ ಇತಿಹಾಸ ಬರೆದಿದೆ. ಆಸೀಸ್ ನೆಲದಲ್ಲಿ 23 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಬಾಂಗ್ಲಾದೇಶ ಗಳಿಸಿದ ಚೊಚ್ಚಲ ಟೆಸ್ಟ್ ಗೆಲುವು ಇದಾಗಿದೆ. ಈ ಗೆಲುವಿನೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್‌ ಆಯ್ತು. 56 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 1 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಹಸನ್ ಮಹಮೂದ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಬಾಂಗ್ಲಾದ ವೇಗಿ ಹಸನ್ ಮಹಮೂದ್ ಅವರ ಮಾರಕ ದಾಳಿಗೆ ತತ್ತರಿಸಿ ಕೇವಲ 198 ರನ್‌ಗಳಿಗೆ ಸರ್ವಪತನ ಕಂಡಿತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಯುವ ಆರಂಭಿಕ ಆಟಗಾರ ತಂಜಿದ್ ಹಸನ್ ತಮೀಮ್ 101 ರನ್‌ ಅವರ ಶತಕ, ನಾಯಕ ನಜ್ಮುಲ್ ಹುಸೇನ್ ಶಾಂತೋ 84 ರನ್‌, ಹಾಗೂ ಮೆಹಿದಿ ಹಸನ್ ಮಿರಾಜ್ 65 ರನ್‌ ನೆರವಿನಿಂದ 426 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, 228 ರನ್‌ಗಳ ಮುನ್ನಡೆ ಪಡೆಯಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಕ್ಯಾಮೆರಾನ್ ಗ್ರೀನ್ 104 ರನ್‌ ಹೊಡೆದು ಏಕಾಂಗಿ ಹೋರಾಟ ನಡೆಸಿದರೂ, ಮೆಹಿದಿ ಹಸನ್ ಮಿರಾಜ್ 5 ವಿಕೆಟ್ ಮತ್ತು ಹಸನ್ ಮಹಮೂದ್ 3 ವಿಕೆಟ್ ಕೀಳುವ ಮೂಲಕ 284 ರನ್‌ಗಳಿಗೆ ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರ್‌ – ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 198/10, ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 426/10, ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 284/10, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ 57/1..,

ಕೇವಲ 57 ರನ್‌ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ, 4ನೇ ದಿನದಾಟದಲ್ಲಿ ಆರಂಭಿಕ ತಂಜಿದ್ ಹಸನ್ ವಿಕೆಟ್ ಕಳೆದುಕೊಂಡರೂ ಶಾದ್ಮನ್ ಇಸ್ಲಾಂ ಹಾಗೂ ಮೊಮಿನುಲ್ ಹಕ್ ಅವರ ಸಂಯಮದ ಆಟದೊಂದಿಗೆ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿ 9 ವಿಕೆಟ್‌ಗಳ ಐತಿಹಾಸಿಕ ಜಯ ದಾಖಲಿಸಿತು. ಇದನ್ನೂ ಓದಿ : ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ಹೆಚ್​​ಡಿಕೆ-ಡಿಕೆಶಿಗೆ ಪತ್ರ

Related posts

ಜೂನ್ 13 ರಿಂದ ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸ..!

Kalpana Editor

ಪೊಲೀಸ್ ಕಾನ್‌ಸ್ಟೇಬಲ್‌ ಪರೀಕ್ಷೆ ಗೊಂದಲ; ಪ್ರಿಯಾಂಕ್‌ ರಾಜೀನಾಮೆಗೆ ಸಿಟಿ ರವಿ ಆಗ್ರಹ..!

kknewskannada1987@gmail.com

ನನಗೆ ಸಚಿವ ಸ್ಥಾನ ನೀಡಲೇಬೇಕು, ಅದನ್ನು ಬಿಟ್ಟು ಬೇರೆ ಮಾತುಕತೆ ಇಲ್ಲ – ಎಂ ಕೃಷ್ಣಪ್ಪ

kknewskannada1987@gmail.com