August 25, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ವಿಡಿಯೋ ಕಾನ್ಫರೆನ್ಸ್ ಬದಲು ಖುದ್ದು ಹಾಜರಿ ಕೋರಿದ್ದ ದರ್ಶನ್ ಅರ್ಜಿ ವಜಾ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೋರ್ಟ್ ವಿಚಾರಣೆಯಲ್ಲಿ ತಮಗೆ ವಿಡಿಯೋ ಕಾನ್ಫರೆನ್ಸ್ ಬದಲು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಅವರು ಮನವಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್ 17) ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಆದೇಶ ಪ್ರಕಟಿಸಿದೆ. ದರ್ಶನ್ ಸಲ್ಲಿಸಿದ್ದ, ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರಿಗೆ ಸೂಚನೆ ನೀಡಲಾಗಿದೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ಖುದ್ದು ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಸೂಚನೆ ಪಡೆಯಲು ಅನುಕೂಲ ಆಗುತ್ತದೆ. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಎಸ್​ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

‘ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ. ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಖುದ್ದು ಹಾಜರಿ ಅಗತ್ಯವಿಲ್ಲ’ ಎಂದು ಪ್ರಸನ್ನ ಕುಮಾರ್ ವಾದ ಮಾಡಿದ್ದರು. ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಕಾಯ್ದಿರಿಸಿದ್ದರು. ಇಂದು ಆದೇಶ ಪ್ರಕಟ ಆಗಿದ್ದು, ದರ್ಶನ್ ಅವರಿಗೆ ಹಿನ್ನಡೆ ಆಗಿದೆ.

ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ. ನಿಯಮ 8.3 ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸಾಕ್ಷ್ಯ ವಿಚಾರಣೆ ವೇಳೆ ಅಗತ್ಯವಿರುವಾಗ ಸಂಪರ್ಕದ ಅವಕಾಶ ನೀಡಬೇಕು. ಸಾಕ್ಷ್ಯ ವಿಚಾರಣೆಗೆ ಮೊದಲು, ನಡುವೆ, ನಂತರ ಸಂಪರ್ಕಿಸಬಹುದು. ಸಾಕ್ಷಿಗಳ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಸಿವಿಲ್ ಕೋರ್ಟ್​ನ ತಾಂತ್ರಿಕ ವಿಭಾಗಕ್ಕೆ ಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿಯಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

Related posts

ರೌಡಿಶೀಟರ್‌ನ ಬರ್ಬರ ಹತ್ಯೆ – ದುಷ್ಕರ್ಮಿಗಳು ಪರಾರಿ..!

Kalpana Editor

ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ; ಬೆಂಬಲಿಗರಿಂದ ಬಾಗೇಪಲ್ಲಿ ಬಂದ್, ಪ್ರತಿಭಟನೆ..!

kknewskannada1987@gmail.com

ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ..!

kknewskannada1987@gmail.com