22.4 C
ಬೆಂಗಳೂರು
October 6, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ತಲೆಗೆ ಹೊಡೆದು ಪರಾರಿ..!

ಮಂಗಳೂರು : ತಡರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್​ಸ್ಟೆಬಲ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆಮಂಗಳೂರಿನ ಕೋಡಿಕಲ್‌ನಲ್ಲಿ ಭಾನುವಾರ ನಡೆದಿದೆ. ಪೊಲೀಸ್ ಕಾನ್‌ಸ್ಟೆಬಲ್ ಹನುಮಂತ್ ಕಾಂತಿ ಅವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಹೊಡೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಾರಾಯಣ ಗುರು ಸಹಕಾರಿ ಸಂಘದ ಕಟ್ಟಡದ ಬಳಿ ಕಾನ್‌ಸ್ಟೆಬಲ್ ಹನುಮಂತ್ ಮತ್ತು ಗೃಹರಕ್ಷಕ ಸಿಬ್ಬಂದಿ ಬಸವರಾಜ್ ಕರ್ತವ್ಯದಲ್ಲಿದ್ದರು.

ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಸವಾರರು ನಿಲ್ಲಿಸದೆ ತಲೆ ತಪ್ಪಿಸಿಕೊಂಡಿದ್ದಾರೆ. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸ್ಥಳಕ್ಕೆ ಹಿಂತಿರುಗಿದ ಬೈಕ್‌ ಸವಾರ, ಕಾನ್‌ಸ್ಟೆಬಲ್ ಹನುಮಂತ್ ಅವರ ತಲೆಗೆ ಬಲವಾಗಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಗಾಯಗೊಂಡ ಸಿಬ್ಬಂದಿ ಹಲ್ಲೆಕೋರರನ್ನು ಹಿಡಿಯಲು ಪ್ರಯತ್ನಿಸಿದರಾದರೂ ಅವರು ಸಿಗಲಿಲ್ಲ.

ತಲೆಗೆ ಸಣ್ಣಪುಟ್ಟ ಗಾಯಗಳಾಗಿರುವ ಹನುಮಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಇಡೀ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉರ್ವಾ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Related posts

ಪೆಟ್ರೋಲ್‌ ಟ್ಯಾಂಕ್‌ಗೆ ನೀರು ಹಾಕಿ ಎಥೆನಾಲ್‌ ವಿರುದ್ಧ ಅಪಪ್ರಚಾರ; ಯೂಟ್ಯೂಬರ್‌ ವಿರುದ್ಧ ಟೊಯೋಟಾ ಎಫ್‌ಐಆರ್‌

Kalpana Editor

ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ..!

Kalpana Editor

ಮನೆಯಲ್ಲಿ ಮಾಡಿ, ಚೀಸೀ ಕಾರ್ನ್ ಡಿಸ್ಕ್.. ಸೂಪರ್‌ ಟೇಸ್ಟಿ.!

Kalpana Editor