23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ; ವಿಜಯ ಪ್ರಕಾಶ್‌ ಭಾವುಕ..!

ಮೈಸೂರು : ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್‌ ಅವರು ಇಂದು ಸ್ವರ ಸಾಮ್ರಾಜ್ಞೆ ಎಸ್‌. ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಮೈಸೂರು ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿದ ಅವರು ಅಂತಿಮ ನಮ ಸಲ್ಲಿಸಿ, ಭಾವುಕರಾದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಜಾನಕಿ ಅಮ್ಮನವರನ್ನ ಯಾವುದರೂ ಕಾರ್ಯಕ್ರಮಕ್ಕೆ ಕರ್ಕೊಂಡು ಹೋಗಬೇಕು ಅಂತಾ ಆಸೆ ಇತ್ತು, ಅಷ್ಟರಲ್ಲಿ ಹೀಗಾಯ್ತು. ನಾವೆಲ್ಲರೂ ಅವರ ಹಾಡಿನ ಶಿಷ್ಯರು. ಎಲ್ಲಾ ಭಾಷೆಯ ಹಾಡುಗಳಿಗೂ ಅವರು ಜೀವ ತುಂಬಿದ್ರು. ಆ ಜೀವ ಇವತ್ತು ಮೈಸೂರಲ್ಲಿ ಉಸಿರು ಚೆಲ್ಲಿದೆ ಭಾವುಕರಾದರು.

ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ. ಅವರು ಹಾಡುಗಳ ಮೂಲಕ ಎಲ್ಲರಿಗೂ ಪ್ರೀತಿ ಕೊಟ್ಟವರು. ಹೊಸಬರಿಗೆ ಮಾರ್ಗದರ್ಶನ ಕೊಡೋಕೆ ಅವರು ಯಾವಾಗಲೂ ಸಿದ್ಧವಾಗಿದ್ರು. ನಾನು ಒಬ್ಬ ಗಾಯಕನಾಗಿ ಹೇಳ್ತಿದ್ದೀನಿ ಇದು ಎಲ್ಲರಿಗೂ ತುಂಬಲಾರದ ನಷ್ಟ. ಭಗವಂತ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಆಶಿಸಿದರು.

ಜಾನಕಿ ಅಮ್ಮನನ್ನ ಭೇಟಿ ಆದಾಗಲೆಲ್ಲಾ ಬಹಳ ಚನ್ನಾಗಿ ಹಾಡ್ತೀಯ ನಿನ್ನ ಧ್ವನಿ ತುಂಬಾ ಚನ್ನಾಗಿದೆ ಅಂತಾ ಹೇಳೋರು. ಹೊಸಬರಿಗೆ ತುಂಬಾ ಪ್ರೋತ್ಸಾಹ ಕೊಡ್ತಾ ಇದ್ರು. ಅವರು ಪ್ರತಿನಿತ್ಯ ಹಾಡುಗಳೊಂದಿಗೆ ಜೀವಿಸಿದವರು. ಅವರ ಹಾಡಿನ ಮಾಧುರ್ಯ ಅವರ ಕಂಠದ್ದಲ್ಲ ಹೃದಯದ್ದು ಎಂದು ಬಣ್ಣಿಸಿದರು. ಇದನ್ನೂ ಓದಿ : ಬೀಳಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ; ಶ್ರೀಗಂಧದ ಕಟ್ಟಿಗೆ ಜಪ್ತಿ..!

Related posts

ಬಿಡದಿ ಟೌನ್‌ಶಿಪ್‌ ಜಟಾಪಟಿ; ಭೂಸ್ವಾಧೀನ ಆದೇಶ ತಕ್ಷಣ ಕೈ ಬಿಡಬೇಕು – ವಿಜಯೇಂದ್ರ ಆಗ್ರಹ..!

Kalpana Editor

ಅತಿದೊಡ್ಡ ಡಿಜಿಟಲ್ ಅರೆಸ್ಟ್ ಕೇಸ್​​​ ಭೇದಿಸಿದ ಖಾಕಿ; 6 ಆರೋಪಿಗಳ ಬಂಧನ..!

Kalpana Editor

ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ..!

Kalpana Editor