August 1, 2026
kranthikidi.com
ತಾಜಾಸುದ್ದಿರಾಜ್ಯ

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂತೋಷ್‌ ಲಾಡ್‌ ಕಣ್ಣೀರು..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಚಿವ ಸಂತೋಷ್‌ ಲಾಡ್‌ ಕಣ್ಣೀರಿಟ್ಟಿದ್ದಾರೆ. ರಾಜೀನಾಮೆಗೂ ಮುನ್ನ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಇಂದು ಬ್ರೇಕ್‌ಫಾಸ್ಟ್‌ ಸಭೆ ನಡೆಸಿದರು. ಈ ವೇಳೆ ತಮ್ಮ ರಾಜೀನಾಮೆಯನ್ನು ಸಹ ಘೋಷಣೆ ಮಾಡಿದರು.

ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌ ಎಂದು ಘೋಷಿಸಿ, ಅವರಿಗೆ ಸಹಕಾರ ನೀಡುವಂತೆ ಸಚಿವರಲ್ಲಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. ಸಿದ್ದರಾಮಯ್ಯ ರಾಜೀನಾಮೆ ಘೋಷಣೆ ಕೇಳಿ ಸಭೆಯಲ್ಲೇ ಆಪ್ತ ಸಚಿವರು ಕಣ್ಣೀರಿಟ್ಟರು. ಸಭೆ ಬಳಿಕ ಒಬ್ಬೊಬ್ಬರಾಗಿ ಹೊರಬಂದ ಸಚಿವರ ಮುಖದಲ್ಲಿ ಬೇಸರದ ಭಾವ ಕಂಡುಬಂದಿತು.

ಸಿಎಂ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ರಾಜೀನಾಮೆ ಕುರಿತು ಸಚಿವ ಸಂತೋಷ್‌ ಲಾಡ್‌ ಬಳಿ ಮಾಧ್ಯಮದವರು ಪ್ರಶ್ನೆ ಕೇಳಿದರು. ಈ ವೇಳೆ, ಗದ್ಗದಿತರಾದ ಸಂತೋಷ್‌ ಲಾಡ್‌ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. ಯಾವುದೇ ಪ್ರತಿಕ್ರಿಯೆ ನೀಡದೇ ಕಾರಲ್ಲಿ ಹೊರಟುಹೋದರು.

Related posts

ವಾಹನ ಸವಾರರಿಗೆ ಮತ್ತೊಂದು ಜೀವಭಯ ಎದರು; ಯಶವಂತಪುರ-ತುಮಕೂರು ರಸ್ತೆಯ ಮೇಲ್ಸೇತುವೆ ಶಿಥಿಲಾವಸ್ಥೆ..!

Kalpana Editor

ಮಾವಿನಹಣ್ಣು ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ..!

Kalpana Editor

ವೈರಲ್‌ ಆಗಿರೋದು ಎಐ ಆಡಿಯೋ, ಯಾವ ತನಿಖೆ ಬೇಕಾದ್ರೂ ಆಗಲಿ – ಜಮೀರ್‌ ಸವಾಲು..!

Kalpana Editor