22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ವಾಹನ ಸವಾರರಿಗೆ ಮತ್ತೊಂದು ಜೀವಭಯ ಎದರು; ಯಶವಂತಪುರ-ತುಮಕೂರು ರಸ್ತೆಯ ಮೇಲ್ಸೇತುವೆ ಶಿಥಿಲಾವಸ್ಥೆ..!

ಬೆಂಗಳೂರು : ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಮತ್ತೊಂದು ಜೀವಭಯ ಎದುರಾಗಿದ್ದು, ಯಶವಂತಪುರದ ತುಮಕೂರು ರಸ್ತೆಯ ಮೇಲ್ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಸೇತುವೆಯ ಕಾಂಕ್ರೀಟ್ ಭಾಗಗಳು ಉದುರುವ ಸ್ಥಿತಿಯಲ್ಲಿವೆ ಎಂಬ ಆತಂಕ ವ್ಯಕ್ತವಾಗಿದೆ.

1988ರಲ್ಲಿ ಎಸ್ ಆರ್ ಬೊಮ್ಮಾಯಿ CM ಆಗಿದ್ದರಾ ಮತ್ತು ಮಾಜಿ ಪ್ರಧಾನಿ ಮಂತ್ರಿ ದೇವಗೌಡ ಅವರು ಲೋಕ್ ಉಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದಾಗ ಮೇಲ್ಚೇತುವೆ ಉದ್ಘಾಟನೆ ಮಾಡಿದ್ದರು.

ಮೇಲ್ಸೇತುವೆಯ ಕೆಳಭಾಗದಲ್ಲಿ ರಾಜಾಜಿನಗರ ಕಡೆಗೆ ಸಾಗುವ ವಾಹನ ಸವಾರರು ಅಪಾಯದಲ್ಲಿ ಸಂಚರಿಸುತ್ತಿದ್ದಾರೆ. ನಿತ್ಯ ಸಾವಿರಾರು ವಾಹನಗಳು ಇದೇ ಮಾರ್ಗದಲ್ಲಿ ಓಡಾಡುತ್ತಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಿದೆ. ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅನಾಹುತ ಸಂಭವಿಸುವ ಮುನ್ನವೇ ಮೇಲ್ಸೇತುವೆಯ ತುರ್ತು ಪರಿಶೀಲನೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುರಕ್ಷತೆಗಾಗಿ ಅಪಾಯದ ಭಾಗವನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇದನ್ನೂ ಓದಿ : ಮೊದಲ ಆಷಾಢ ಶುಕ್ರವಾರ ಹಿನ್ನೆಲೆ; ಚಾಮುಂಡೇಶ್ವರಿಗೆ ವಿಶೇಷ ಪೂಜೆ..!

Related posts

ಇಂದು ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ..!

Kalpana Editor

ರೇವಣ್ಣ ಸಲಹೆಯಂತೆ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಪೆರೋಲ್ ಸಲ್ಲಿಸದ ಪ್ರಜ್ವಲ್ ರೇವಣ್ಣ

Kalpana Editor

ದಾಖಲೆ ಬರೆದ ಪ್ರಧಾನಿ ಮೋದಿಗೆ ನಟ ಸುದೀಪ್, ರಿಷಬ್ ಶೆಟ್ಟಿ ಶುಭಾಶಯ..!

Kalpana Editor