August 1, 2026
kranthikidi.com
ತಾಜಾಸುದ್ದಿದೇಶಸಿನಿಮಾ

ದಾಖಲೆ ಬರೆದ ಪ್ರಧಾನಿ ಮೋದಿಗೆ ನಟ ಸುದೀಪ್, ರಿಷಬ್ ಶೆಟ್ಟಿ ಶುಭಾಶಯ..!

ನರೇಂದ್ರ ಮೋದಿಯವರು ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಅತಿಹೆಚ್ಚು ಕಾಲ ಪ್ರಧಾನಿಯಾಗಿ ದಾಖಲೆ ಸೃಷ್ಟಿಸಿದ್ದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನ ಮುರಿದು ಮುನ್ನುಗ್ಗುತ್ತಿರುವ ನರೇಂದ್ರ ಮೋದಿಯವರಿಗೆ ಸ್ಯಾಂಡಲ್‌ವುಡ್ ತಾರೆಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ನಟ ಕಿಚ್ಚ ಸುದೀಪ್‌ ಹಾಗೂ ರಿಷಬ್ ಶೆಟ್ಟಿ ಶುಭಾಶಯ ಕೋರಿದ್ದಾರೆ.

ನರೇಂದ್ರ ಮೋದಿಯವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಕಿಚ್ಚ ಸುದೀಪ್ ʻನಾವು ಈ ಸಾಧನೆಯನ್ನ ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು. 12 ವರ್ಷಗಳು ಅದೇ ವೇಗ, ಅದೇ ಶಕ್ರಿ, ನಿಧಾನಗತಿಯೇ ಇಲ್ಲ. ನರೇಂದ್ರ ಮೋದಿಯವರೇ ನಿಮ್ಮ ಸಮರ್ಪಣೆ ಮತ್ತು ಸಾಧನೆಗೆ ಹೃದಯಪೂರ್ವಕ ನಮನಗಳು. ಇದು ನಮಗೆ ಹೆಮ್ಮೆಯ ಕ್ಷಣ, ನೀವು ನಿರಂತರವಾಗಿ ಯಶಸ್ಸು ಸಾಧಿಸಿ ಮತ್ತು ಮುಂದೆ ಬರುವ ಎಲ್ಲದರಲ್ಲೂ ನಿಮಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಕೂಡ ಮೋದಿಯವರ ಸಾಧನೆಯನ್ನ ಕೊಂಡಾಡಿದ್ದಾರೆ. ಎಕ್ಸ್‌ನಲ್ಲಿ ಮೋದಿಯವರಿಗೆ ಅಭಿನಂದನೆ ತಿಳಿಸಿರುವ ರಿಷಬ್, ʻಐತಿಹಾಸಿಕ ನಾಯಕನಿಗೆ ಇದೊಂದು ಮೈಲಿಗಲ್ಲು, ಭಾರತದಲ್ಲಿ ಅತಿ ಹೆಚ್ಚು ಕಾಲ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ವಿಕಸಿತ ಭಾರತಕ್ಕಾಗಿ ಅವಿಶ್ರಾಂತ ಸೇವೆ, ದೂರದೃಷ್ಟಿ ಮತ್ತು ಸಮರ್ಪಣೆ ಶ್ಲಾಘನೀಯ, ರಾಷ್ಟ್ರವನ್ನ ನೀವು ಇನ್ನೂ ಎತ್ತರಕ್ಕೆ ಕೊಂಡೊಯ್ಯಿರಿʼ ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ : ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣ; ಹತ್ತು ಮಂದಿ ಬಂಧನ..!

Related posts

ದೂರದ ದ್ವೀಪ ನೋಡ್ತಿರೋ ದರ್ಶನ್‌ – ಇನ್‌ಸ್ಟಾದಲ್ಲಿ ವಿಜಯಲಕ್ಷ್ಮಿ ಸ್ಟೋರಿ ಪೋಸ್ಟ್‌..!

Kalpana Editor

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!

Kalpana Editor

ಇರಾನ್ ಮೇಲೆ ಅಮೆರಿಕ ವಾಯುದಾಳಿ; ರೇಡಾರ್ ಕೇಂದ್ರಗಳು ಧ್ವಂಸ..!

Kalpana Editor