22.1 C
ಬೆಂಗಳೂರು
September 21, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣ; ಹತ್ತು ಮಂದಿ ಬಂಧನ..!

ಹಾಸನ : ನಟೋರಿಯಸ್ ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೋಹನ್, ಶಶಿ, ಸಾಯಿನಾಥ್, ಭರತ್, ಲಿಂಗರಾಜ್, ರಾಕೇಶ್, ಆದಿತ್ಯ, ಆಕಾಶ್, ದಿಲೀಪ್ ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸರು ತಲಾಶ್ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಾವು ಆರೋಪಿಗಳಲ್ಲ ಎಂದು ಬೆಂಗಳೂರು ಮೂಲದ ನಾಲ್ವರು ಹಾಗೂ ತುಮಕೂರು ಮೂಲದ ಓರ್ವ ಯುವಕ ಪೊಲೀಸ್ ಠಾಣೆಗೆ ಹಾಜರಾಗಿದ್ದರು.

ಕೊಲೆ ಪ್ರಕರಣದಲ್ಲಿ ನಮ್ಮನ್ನ ಹುಡುಕುತ್ತಿದ್ದಾರಂತೆ, ಹಾಗಾಗಿ ಪೊಲೀಸರು ನಮ್ಮ ಮನೆ ಬಳಿ ಬರುವುದು ಬೇಡ ಎಂದು ನಾವೇ ಪೊಲೀಸ್ ಠಾಣೆಗೆ ಬಂದಿದ್ದೇವೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಡಿವೈಎಸ್‌ಪಿ ಕಚೇರಿಗೆ ಬಂದು ಐವರು ಶರಣಾಗಿದ್ದರು. ಇದನ್ನೂ ಓದಿ : ಏರ್‌ಪೋರ್ಟ್‌ನಲ್ಲಿ 3.12 ಕೋಟಿ ಮೌಲ್ಯದ ಚಿನ್ನ, ಮಾದಕ ವಸ್ತು ಜಪ್ತಿ..!

ಇವರೆಲ್ಲರೂ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ತೀವ್ರ ವಿಚಾರಣೆ ನಡೆಸಿದ ಪೊಲೀಸರ ಒಟ್ಟು ಹತ್ತು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಜೂನ್ 7ರ ರಾತ್ರಿ ಹಾಸನದ ಜಿಲ್ಲಾ ಕೋರ್ಟ್ ಸಮೀಪ ಮಂಜೇಶ್ ಭೀಕರ ಹತ್ಯೆ ನಡೆದಿದ್ದು, ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related posts

ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾದ ಬೆಂಡೆಕಾಯಿ ಸೂಪ್..!

Kalpana Editor

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯ – ಯು.ಟಿ ಖಾದರ್

Kalpana Editor

ಕೇಂದ್ರ Vs ಮೆಟಾ; ಎಚ್ಚರಿಕೆ ಬೆನ್ನಲ್ಲೇ, ಕ್ಷಮೆ ಕೋರಿದ ಸಿಇಒ ಮಾರ್ಕ್ ಜುಕರ್‌ಬರ್ಗ್

kknewskannada1987@gmail.com