22.1 C
ಬೆಂಗಳೂರು
September 21, 2026
kranthikidi.com
ಅಡುಗೆಆರೋಗ್ಯತಾಜಾಸುದ್ದಿ

ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾದ ಬೆಂಡೆಕಾಯಿ ಸೂಪ್..!

ಬೆಂಡೆಕಾಯಿಯಲ್ಲಿ ಮಧುಮೇಹ ನಿಯಂತ್ರಣದ ಅಂಶಗಳಿದ್ದು, ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕೂಡ ನಿಯಂತ್ರಣದಲ್ಲಿರುತ್ತದೆ. ಬೆಂಡೆಕಾಯಿಯನ್ನು ಸುಲಭವಾಗಿ ಸೂಪ್‌ ಮಾಡಿ ಸೇವಿಸಬಹುದು. ಸೂಪ್‌ ಮಾಡುವ ವಿಧಾನ…,

ಬೆಂಡೆಕಾಯಿ ಸೂಪ್‌ಗೆ ಬೇಕಾಗಿರುವ ಸಾಮಗ್ರಿಗಳು – 1 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, 2 ಕಪ್ ತೊಳೆದು ಹೆಚ್ಚಿದ ಬೆಂಡೆಕಾಯಿ, 3 ಕಪ್ ಹೆಚ್ಚಿದ ಟೊಮೆಟೊ, 1 ಕಪ್ ಹೆಚ್ಚಿದ ದಪ್ಪ ಮೆಣಸಿನಕಾಯಿ, 1 ಕಪ್ ಚೆನ್ನಾಗಿ ಬೇಯಿಸಿದ ಮುಸುಕಿನ ಜೋಳ, 1 ಟೀ ಚಮಚದಷ್ಟು ಕಪ್ಪು ಮೆಣಸು, 1 ಟೀ ಚಮಚದಷ್ಟು ಗ್ರೌಂಡ್ ಬ್ಲಾಕ್ ಪೆಪ್ಪರ್, 4 ಕಪ್ ನೀರು, ಉಪ್ಪು: ರುಚಿಗೆ ತಕ್ಕಷ್ಟು..,

ಮೊದಲಿಗೆ ಗ್ಯಾಸ್ ಸ್ಟವ್ ಮೇಲೆ ಒಂದು ಪ್ಯಾನ್ ಬಿಸಿಗಿಟ್ಟು ಸ್ವಲ್ಪ ಎಣ್ಣೆ ಹಾಕಬೇಕು. ಈಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಹೆಚ್ಚಿದ ಬೆಂಡೆಕಾಯಿ, ಟೊಮೆಟೊ, ದಪ್ಪಮೆಣಸಿನಕಾಯಿ, ಮುಸುಕಿನ ಜೋಳ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿ ಬೆಂಡೆಕಾಯಿ ಬೇಯುವವರೆಗೆ ಚೆನ್ನಾಗಿ ಕುದಿಸಿ. ಈಗ ರುಚಿಕರವಾದ ಬೆಂಡೆಕಾಯಿ ಸೂಪ್ ಸವಿಯಲು ಸಿದ್ಧವಾಗಿರುತ್ತದೆ. ಇದನ್ನೂ ಓದಿ : ಮಳೆ ಅಬ್ಬರಕ್ಕೆ ಹಳಿ ಮೇಲೆ ಗುಡ್ಡ ಕುಸಿತ – ರೈಲು ಸಂಚಾರ ಸ್ಥಗಿತ..!

Related posts

ಮಂತ್ರಾಲಯದಲ್ಲಿ ಗುರುಪೂರ್ಣಿಮೆ ಸಂಭ್ರಮ; ಚಿನ್ನದ ಪಲ್ಲಕ್ಕಿ, ವಿಶೇಷ ಪೂಜೆ ಸಲ್ಲಿಕೆ..!

Kalpana Editor

ಕೊಡಗಿನಲ್ಲಿ ಬಿರುಸು ಪಡೆದ ಮಳೆ; ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ..!

Kalpana Editor

ಪೋಕ್ಸೊ ಪ್ರಕರಣ; ವಚನಾನಂದ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..!

Kalpana Editor