22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಮಂತ್ರಾಲಯದಲ್ಲಿ ಗುರುಪೂರ್ಣಿಮೆ ಸಂಭ್ರಮ; ಚಿನ್ನದ ಪಲ್ಲಕ್ಕಿ, ವಿಶೇಷ ಪೂಜೆ ಸಲ್ಲಿಕೆ..!

ರಾಯಚೂರು : ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತದೆ. ರಾಯರ ಮೂಲ ಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಅಲಂಕಾರ, ಬಂಗಾರದ ಕವಚ ಅಳವಡಿಕೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ಆಷಾಢ ಶುದ್ದ ಪೂರ್ಣಿಮೆ ಹಿನ್ನೆಲೆ ರಾಯರು ತಪಸ್ಸು ಮಾಡಿದ್ದ ತುಳಸಿ ವನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಿ, ಚಿನ್ನದ ಪಲ್ಲಕ್ಕಿಯಲ್ಲಿ ಮೃತ್ತಿಕೆ ಮೆರವಣಿಗೆ ಮಾಡಲಾಯಿತು. ಬಳಿಕ ಪೂಜೆ ನೆರವೇರಿಸಿ ಮೃತ್ತಿಕೆಯನ್ನ ರಾಯರ ಮೂಲ ಬೃಂದಾವನದ ಮೇಲೆ ಇರಿಸಲಾಯಿತು. ಒಂದು ವರ್ಷದವರೆಗೆ ಮೃತ್ತಿಕೆಗೆ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಯಾವುದಾದರೂ ಸ್ಥಳದಲ್ಲಿ ಬೃಂದಾವನ ಸ್ಥಾಪಿಸಲು ಇಲ್ಲಿನ ಮಣ್ಣನ್ನೇ ಬಳಸಲಾಗುತ್ತದೆ. ಇದನ್ನೂ ಓದಿ : ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಪ್ರತಿಭಟನೆ, ಪ್ರತಿಕೃತಿ ದಹನ..!

Related posts

ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ ಸೋಂಕು ವದಂತಿ ಸುಳ್ಳು – ಸಚಿವ ಯುಟಿ ಖಾದರ್​ ಸ್ಪಷ್ಟನೆ..!

Kalpana Editor

ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ – ಕೆರಳಿಸಿದ ಕುತೂಹಲ

Kalpana Editor

ರಾಮ ಮಂದಿರ ದೇಣಿಗೆ ವಿವಾದ – ತುರ್ತು ವಿಚಾರಣೆಗೆ ಸುಪ್ರೀಂ ನಕಾರ..!

Kalpana Editor