kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ – ಕೆರಳಿಸಿದ ಕುತೂಹಲ

ಬೆಂಗಳೂರು/ಮಂಡ್ಯ : ಡಿಸಿಎಂ ಡಿಕೆ ಶಿವಕುಮಾರ್‌ ಅವರ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಡಿಕೆ ಯುಗಾರಂಭವಾಗಲಿದೆ. ಸೋಮವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪಟ್ಟಾಭಿಷೇಕ ನಡೆಯೋ ಸಾಧ್ಯತೆಯಿದೆ. ಹೀಗಾಗಿ ಭಾನುವಾರ (ಮೇ 31) ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್‌ ನೇತೃತ್ವದಲ್ಲಿ ಶಾಸಕಾಂಗ ನಾಯಕನ ಆಯ್ಕೆಯೂ ನಡೆಯಲಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿಕೆ ಶಿವಕುಮಾರ್‌ ಅವರ ಮಿಡ್‌ನೈಟ್‌ ಮೀಟಿಂಗ್‌ ತೀವ್ರ ಕುತೂಹಲ ಕೆರಳಿಸಿದೆ. ಸಚಿವ ಸಂಪುಟಕ್ಕೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಡಿಕೆಶಿ ಮಿಡ್‌ನೈಟ್‌ ಮೀಟಿಂಗ್‌ ನಡೆಸಿದ್ದಾರೆ.

ಹೈಕಮಾಂಡ್‌ ಭೇಟಿ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್, ಕಡಲೂರು ಉದಯ್ ಅವರೊಂದಿಗೆ ಸುಮಾರು 1 ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಆಪ್ತರಾದ ಬೇಳೂರು ಗೋಪಾಲಕೃಷ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಮಾಜಿ ಅಧ್ಯಕ್ಷ ನಲಪಾಡ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ.

ಹೊಸ ಸರ್ಕಾರ ರಚನೆಗೆ ಹೈಕಮಾಂಡ್ ಕೂಡ ರಿಸೆಟ್ ಬಟನ್ ಒತ್ತಿದೆ. ಅಂದ್ಹಾಗೆ ಡಿಕೆ ಟೀಂಗೆ ಯಾರೆಲ್ಲ ಸೇರ್ತಾರೆ..?, ಸಿದ್ದರಾಮಯ್ಯ ಸರ್ಕಾರದ ಸಚಿವರಾಗಿದ್ದವರಿಗೆ ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ..? ಎಷ್ಟು ಜನ ಹೊಸಬರು ಮಂತ್ರಿಗಳಾಗ್ತಾರೆ? ಹೀಗೆ ಸಮುದಾಯ, ಜಿಲ್ಲಾವಾರು ಲೆಕ್ಕಾಚಾರಗಳು ಶುರುವಾಗಿವೆ. ಈ ಮಧ್ಯೆ ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದ ಹಲವರಿಗೆ ಶಾಕ್ ಕಾದಿದೆ. ಹಳಬರಲ್ಲಿ ಎಷ್ಟು ಜನ ಸಚಿವರು ಡಿಕೆ ಸಂಪುಟ ಸೇರ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

Related posts

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಪರಿಚಯಾತ್ಮಕ ಸಭೆಯಲ್ಲಿ ಕಲುಷಿತ ನೀರು ಸರಬರಾಜಾಗದಂತೆ ಕಟ್ಟೆಚ್ಚರ ವಹಿಸಿ; ಈಶ್ವರ ಖಂಡ್ರೆ

Kalpana Editor

ಜಿಹಾದಿ ಸಂಚು ಬಯಲು: ರಾಮಮಂದಿರ ಸ್ಫೋಟಿಸಲು ಸ್ಕೆಚ್, ಶಸ್ತ್ರಾಸ್ತ್ರ ಹಿಡಿದು ಫೋಟೋಶೂಟ್‌..!

Kalpana Editor

ಹೈಕಮಾಂಡ್‌ ಮುಂದೆ ಡಿಸಿಎಂ ಪ್ರಸ್ತಾಪ; ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಡಿಕೆಶಿ ಮಾಸ್ಟರ್‌ಸ್ಟ್ರೋಕ್..!

Kalpana Editor