21.4 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಲ್ಲಿ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೆ ಏರಿಕೆ..!

ಬೆಂಗಳೂರು : ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಹಾಗೂ ಸೊಪ್ಪಿನ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಟುಂಬಗಳ ಮಾಸಿಕ ವೆಚ್ಚದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.

ಹಾಪ್‌ಕಾಮ್ಸ್ ತರಕಾರಿ ದರ – ತರಕಾರಿ ಬೆಲೆ (ಒಂದು ಕೆ.ಜಿಗೆ) – ಹುರಳಿಕಾಯಿ 110ರೂ. ಬದನೆಕಾಯಿ (ಬಿಳಿ) 95 ರೂ. ದಪ್ಪ ಮೆಣಸಿನಕಾಯಿ 90 ರೂ. ಬಜ್ಜಿ ಮೆಣಸಿನಕಾಯಿ 85 ರೂ. ಹುರಳಿಕಾಯಿ ಬಿಳಿ 85 ರೂ. ಬಟಾಣಿ ಕಾಳು 200 ರೂ. ಹಿರೇಕಾಯಿ 60 ರೂ. ಹಾಗಲಕಾಯಿ 64 ರೂ. ಶುಂಠಿ 177 ರೂ. ಬೆಳ್ಳುಳ್ಳಿ 270 ರೂ. ಮೆಂತ್ಯೆ ಸೊಪ್ಪು 125 ರೂ. (ಒಂದು ಕಟ್ಟಿಗೆ 30ರೂ.) ಪುದೀನ 95ರೂ. (ಒಂದು ಕಟ್ಟಿಗೆ 20ರೂ.) ಊಟಿ ಕ್ಯಾರೆಟ್ 90ರೂ. ಡಬಲ್ ಬೀನ್ಸ್ 160ರೂ. ಗೋರಿಕಾಯಿ 70ರೂ.

ಹಣ್ಣುಗಳ ಬೆಲೆ – ಸೇಬು ವಾಷಿಂಗ್ಟನ್ 325ರೂ. ಸೇಬು ಗಾಲ 350ರೂ. ಕಿವಿ ಫ್ರೂಟ್ 800.ರೂ ಲಿಚ್ಚಿ 500ರೂ. ಕಿವಿ ಫ್ರೂಟ್ ಗೋಲ್ಡ್ 1000ರೂ. ಮೂಸಂಬಿ 160ರೂ. ಮಾವು ಬಾದಾಮಿ 200ರೂ. ಮಾವು ಸಕ್ಕರೆ ಗುತ್ತಿ 230ರೂ. ಸಪೋಟ 190ರೂ.

ಹವಾಮಾನ ವೈಪರೀತ್ಯದ ಪರಿಣಾಮವಾಗಿ ಹಲವಾರು ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ ತರಕಾರಿ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಇಳುವರಿ ಕುಂಠಿತವಾಗಿ, ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ : ಹೈದರಾಬಾದ್‌ನ ರಸ್ತೆಗೆ ಟ್ರಂಪ್‌ ಹೆಸರು; ಭಾರತಕ್ಕೆ ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ

Related posts

ಸಿಎಂ ವಿಜಯ್ ವಿಚ್ಛೇದನ ಕೇಸ್‌; ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

Kalpana Editor

ನಾಯಿ ಗೂಡಲ್ಲಿ ಲಾಕ್‌ ಆಗಿದ್ದ, ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

Kalpana Editor

ಉತ್ತರ ಮತ್ತು ಕಲ್ಯಾಣ ಕರ್ನಾಟಕದ ತೀವ್ರ ಬರಪೀಡಿತ ರೈತರಿಗೆ ಪರಿಹಾರ ನೀಡುವಂತೆ ಬಿ. ವೈ. ವಿಜಯೇಂದ್ರ ಆಗ್ರಹ..!

Kalpana Editor