21.9 C
ಬೆಂಗಳೂರು
October 7, 2026
kranthikidi.com
ತಾಜಾಸುದ್ದಿರಾಜ್ಯ

ನಾಯಿ ಗೂಡಲ್ಲಿ ಲಾಕ್‌ ಆಗಿದ್ದ, ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ಚಿಕ್ಕಮಗಳೂರು : ತರೀಕೆರೆ ತಾಲೂಕಿನ ಮುದುಗುಂಡಿ ತಾಂಡ್ಯದಲ್ಲಿ ನಾಯಿಯ ಗೂಡಲ್ಲಿ ಚಿರತೆಯೊಂದು ಲಾಕ್‌ ಆಗಿದ್ದು, ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ಸ್ಥಳಾಂತರಿಸಿದ್ದಾರೆ.

ಕಳೆದ ರಾತ್ರಿ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದ, ಚಿರತೆ ಬೇಟೆಯಾಡುವ ಉದ್ದೇಶದಿಂದ ನಾಯಿ ಗೂಡಿಗೆ ನುಗ್ಗಿದೆ. ಅಲ್ಲಿಂದ ವಾಪಸ್‌ ಬರಲಾಗದೆ, ಅಲ್ಲೇ ಲಾಕ್ ಆಗಿದೆ. ಮುಂಜಾನೆ ನಾಯಿ ಗೂಡಿನಲ್ಲಿ ಚಿರತೆ ಇರುವುದನ್ನು ಕಂಡು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಅರಣ್ಯ ಸಿಬ್ಬಂದಿ ಶಿವಮೊಗ್ಗದಿಂದ ತಜ್ಞರನ್ನು ಕರೆಸಿ ಚಿರತೆಗೆ ಅರಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಿರತೆಯನ್ನು ವೀಕ್ಷಿಸಲು ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಜನಸಾಮಾನ್ಯರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹರಸಾಹ ಪಡುವಂತಾಗಿತ್ತು. ಹಲವು ದಿನಗಳಿಂದ ನಿದ್ದೆಗೆಡಿಸಿದ್ದ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ : ರುಕ್ಮಿಣಿ ವಸಂತ್ AI ಬಿಕಿನಿ ಫೋಟೋ ವೈರಲ್ ಕೇಸ್ – ಆರೋಪಿ ರಂಜಿತ್

Related posts

ಆಗಸ್ಟ್ 1ರಿಂದ ‘ಕೌನ್ ಬನೇಗಾ ಕರೋಡ್‌ಪತಿ’ 18ನೇ ಸೀಸನ್ ಶೂಟಿಂಗ್ ಶುರು

Kalpana Editor

ವಿಡಿಯೋ ಕಾನ್ಫರೆನ್ಸ್ ಬದಲು ಖುದ್ದು ಹಾಜರಿ ಕೋರಿದ್ದ ದರ್ಶನ್ ಅರ್ಜಿ ವಜಾ

kknewskannada1987@gmail.com

ವಂಡರ್‌ಲಾ ರೆಸಾರ್ಟ್‌ನಲ್ಲಿರೋ ‘ಕೈ’ ಶಾಸಕರನ್ನು ಕರೆತರಲು ಬಸ್‌ಗಳ ವ್ಯವಸ್ಥೆ..!

Kalpana Editor