27.4 C
ಬೆಂಗಳೂರು
July 11, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ

ಬೆಂಗಳೂರು : ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಕೊಲೆ ಮಾಡಿ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಶಾಂತ್ ಎಂಬಾತ, ಮೊದಲು ಕೋಣೆಯೊಳಗೆ ತನ್ನ ಮಾವನೊಂದಿಗೆ ಗಲಾಟೆ ನಡೆಸಿ ಆತನನ್ನು ಕೊಲೆ ಮಾಡಿದ್ದಾನೆ. ಶಬ್ದ ಕೇಳಿ ತಾಯಿ ಮತ್ತು ಅಜ್ಜಿ ಬಾಗಿಲು ತೆರೆದಾಗ, ಸಿಕ್ಕಿಬೀಳುವ ಭಯದಿಂದ ಅವರಿಬ್ಬರನ್ನೂ ಬಾಗಿಲಲ್ಲೇ ಕೊಂದಿದ್ದಾನೆ.

ಕೃತ್ಯದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಮನೆಯ ಹೊರಗಿನಿಂದ ಡೋರ್ ಲಾಕ್ ಮಾಡಿ, 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದರೆ ಸಿಕ್ಕಿಬೀಳುತ್ತೇನೆಂಬ ಭಯದಿಂದ ಪ್ರಶಾಂತ್ ಒಳಗಡೆಯೇ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕವೇ ಇಡೀ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ..!

Related posts

ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಜಾರಿ..!

Kalpana Editor

ಒಬೆಸಿಟಿ ಮತ್ತು ಡಯಾಬಿಟಿಸ್ ಸಮಸ್ಯೆ ತಡೆಯಲು ಸಿಂಪಲ್ ಟಿಪ್ಸ್..!

Kalpana Editor

ಮುಂಬೈನಲ್ಲಿ ಮಳೆಯ ರೌದ್ರನರ್ತನ; ಇಂದು 43 ರೈಲು ಸಂಚಾರ ರದ್ದು..!

Kalpana Editor