IMA ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ಮನವಿ ಕುರಿತು ಕಾನೂನು ಪ್ರಕಾರವೇ ಕ್ರಮವಾಗಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ರಾಜ್ಯಪಾಲರು ಅನುಮತಿ ನೀಡಿದ ಬಳಿಕ ಮುಂದಿನ ಬೆಳವಣಿಗೆಗಳನ್ನು ನೋಡೋಣ ಎಂದರು.
“ಯಾರೂ ಕಾನೂನಿಗಿಂತ ಮೇಲಲ್ಲ. ಮೊದಲೇ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ” ಎಂದು ಹೇಳಿದರು. PRC ವಿವಾದ – PRC (ನಿವಾಸ ಪ್ರಮಾಣಪತ್ರ) ನೀಡುವುದು ಸರ್ಕಾರಿ ಅಧಿಕಾರಿಗಳ ಕೆಲಸ, ರಾಜಕೀಯ ಪಕ್ಷಗಳದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು. ಅಕ್ರಮ ವಲಸಿಗರಿಗೆ PRC ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿಹಾಕಿ, ಅದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದರು. “ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕೆಲಸ ರಾಜ್ಯ ಸರ್ಕಾರ ಮಾಡುವುದಿಲ್ಲ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪೌರತ್ವ ಸಾಬೀತಿಗೆ ಯಾವ ದಾಖಲೆ ಬೇಕು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದರು. SIR ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು. KPSC ವಿಚಾರ – KPSCಗೆ ಸಂಬಂಧಿಸಿದ ಆರೋಪಗಳು ಸಾಂವಿಧಾನಿಕ ಸಂಸ್ಥೆಯ ವ್ಯಾಪ್ತಿಗೆ ಬರುವ ವಿಷಯ ಎಂದು ಹೇಳಿದರು. ಸರ್ಕಾರ ಸಾಕ್ಷ್ಯ ಒದಗಿಸಬಹುದು, ಆದರೆ ಅಂತಿಮ ಕ್ರಮ ಕೈಗೊಳ್ಳುವುದು ಆಯೋಗದ ಜವಾಬ್ದಾರಿ ಎಂದರು.
ಆಯೋಗದಲ್ಲಿ ಸಮನ್ವಯ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕೊರತೆ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು. “ಇದು ಯಾವುದೇ ರಾಜ್ಯಕ್ಕೂ ಒಳ್ಳೆಯ ಬೆಳವಣಿಗೆಯಲ್ಲ” ಎಂದು ಹೇಳಿದರು. ಸಾರ್ವಜನಿಕ ಸೇವಾ ಆಯೋಗದ ವಿಶ್ವಾಸಾರ್ಹತೆಯನ್ನು ಆಯೋಗವೇ ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ : ನನಗೆ ಕೊಟ್ರೆ ರಾಜ್ಯದ KAT, KPSC ಯನ್ನೇ ರದ್ದು ಮಾಡ್ತೇನೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ
