26.3 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿವಿದೇಶ

ವಿಯೆಟ್ನಾಂ ದ್ವೀಪದಲ್ಲಿ ಭಾರತೀಯ ಪ್ರವಾಸಿಗರಿದ್ದ, ಬೋಟ್‌ ಮುಳುಗಡೆ; 15 ಮಂದಿ ಸಾವು..!

ಹನೋಯ್ : ವಿಯೆಟ್ನಾಂನ ಫು ಕ್ವಾಕ್‌ ದ್ವೀಪದ ಬಳಿಕ 32 ಮಂದಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ ಬೋಟ್‌ ಮುಳುಗಡೆಯಾಗಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ (ಇಂದು) ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿಯ ಹೊನ್ ಮೇ ರುಟ್ ನ್ಗೋಯ್ ಬಳಿ 36 ಭಾರತೀಯ ಭಾರತೀಯ ಪ್ರವಾಸಿಗರು, ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ ಮಗುಚಿಬಿದ್ದಿದೆ. ಘಟನೆ ಬಳಿಕ ಸ್ಥಳೀಯ ಅಧಿಕಾರಿಗಳು ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಈ ಘಟನೆಯಲ್ಲಿ 32 ಭಾರತೀಯರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ, ವಿಯೆಟ್ನಾಂ ಅಧಿಕಾರಿಗಳು ಈವರೆಗೆ ಯಾವುದೇ ಜೀವಹಾನಿಯನ್ನು ದೃಢಪಡಿಸಿಲ್ಲ. ಒಟ್ಟಿನಲ್ಲಿ ಭಾರತೀಯರಿದ್ದ ಬೋಟ್‌ ಮುಳುಗಡೆಯಾಗಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಕುರಿತು ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆಲ ಗಂಟೆಗಳ ಹಿಂದೆ ವಿಯೆಟ್ನಾಂನ ಫು ಕ್ವಾಕ್‌ ದ್ವೀಪದ ಬಳಿ ಹಲವಾರು ಭಾರತೀಯ ಪ್ರವಾಸಿಗರನ್ನ ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿದೆ. ಸ್ಥಳೀಯ ಅಧಿಕಾರಿಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಿಖರ ಮಾಹಿತಿ ಖಚಿತಪಡಿಸಿಕೊಳ್ಳಲಾಗುತ್ತಿದೆ.

ಈ ಬೆನ್ನಲ್ಲೇ ಹೊ ಚಿ ಮಿನ್ಹ್ ನಗರದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪಿಸಿ, ಸಹಾಯವಾಣಿಯನ್ನೂ ಬಿಡುಗಡೆ ಮಾಡಲಾಗಿದೆ. ಸಂತ್ರಸ್ತ ಕುಟುಂಬಗಳು ಸಹಾಯಕ್ಕಾಗಿ ಸಂಪರ್ಕಿಸುವಂತೆ ಕೋರಿದೆ. ಇದನ್ನೂ ಓದಿ : ಮುಂಬೈನ ಬಾಂದ್ರಾ ಅಪಾರ್ಟ್‌ಮೆಂಟ್‌ ಮಾರಿದ ನಟ ಸಲ್ಮಾನ್‌ ಖಾನ್‌

Related posts

ಮೂತ್ರನಾಳದ ಸೋಂಕಿನ ಕುರಿತು ನಿರ್ಲಕ್ಷ ಬೇಡ; ತಡೆಗಟ್ಟಲು ಇಲ್ಲಿದೆ ಮಾರ್ಗದರ್ಶನ..

Kalpana Editor

ಸಿಎಂ ವಿಜಯ್ ವಿಚ್ಛೇದನ ಕೇಸ್‌; ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

Kalpana Editor

ಜಾನಪದ ಲೋಕಕ್ಕೆ ನಷ್ಟ – ವೀರಗಾಸೆ ಕಲಾರತ್ನ ಮಹದೇವಪ್ಪ ನಿಧನಕ್ಕೆ ಚೆಲುವರಾಯಸ್ವಾಮಿ ಸಂತಾಪ..!

Kalpana Editor