23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ರುಕ್ಮಿಣಿ ವಸಂತ್ AI ಬಿಕಿನಿ ಫೋಟೋ ವೈರಲ್ ಕೇಸ್ – ಆರೋಪಿ ರಂಜಿತ್

ಬೆಂಗಳೂರು : ಕಾಂತಾರಾ ನಟಿ ರುಕ್ಮಿಣಿ ವಸಂತ್‌ AI ಅಶ್ಲೀಲ ಫೋಟೋ ವೈರಲ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ವೇಳೆ ಆರೋಪಿ ಕುರಿತು ಸ್ಫೋಟಕ ರಹಸ್ಯಗಳು ಬಗಿರಂಗಗೊಂಡಿವೆ.

ಈ ವಿಚಾರಣೆ ವೇಳೆ ಆರೋಪಿಗಳ ಬ್ಯಾಗ್ರೌಂಡ್‌ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಆರೋಪಿ ರವಿಕುಮಾರ್ ಬಿಎಸ್‌ಸಿ ನರ್ಸಿಂಗ್ ಓದ್ತಿದ್ದಾನೆ. ತನ್ನದೇ ಯುಟ್ಯೂಬ್ ಚಾನೆಲ್ ಮಾಡಿಕೊಂಡಿದ್ದ ರವಿಕುಮಾರ್, ಡೀಪ್ ಫೇಕ್ ವೀಡಿಯೊಗಳನ್ನು ಮಾಡಿ ಅಪ್ಲೋಡ್ ಮಾಡೋದಕ್ಕೆ ಶುರು ಮಾಡಿದ್ದ ಅನ್ನೋದು ಬೆಳಕಿಗೆ ಬಂದಿದೆ.

ಮತ್ತೊಬ್ಬ ಆರೋಪಿ ರಂಜಿತ್ ಕುಮಾರ್ ಸಾಫ್ಟ್ ವೇರ್ ಎಂಜಿನಿಯರ್‌ ಆಗಿದ್ದು, ವರ್ಷಕ್ಕೆ 20 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಹೊಂದಿದ್ದಾನೆ. ಫನ್‌ಗಾಗಿ ನಟಿಯರ ಡೀಪ್‌ಫೇಕ್ ವಿಡಿಯೋ ಮಾಡ್ತಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 3ನೇ ಆರೋಪಿ ಚಂದ್ರಕಾಂತ್ ಚಾರ್ಟೆಡ್ ಅಕೌಂಟೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.

ಮಜಾ ತೆಗೆದುಕೊಳ್ಳಲು ನಟಿಯರ ಡೀಫ್ ಫೇಕ್ ವೀಡಿಯೊ ಮಾಡ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತರಿಂದ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು ಎಐ ತಂತ್ರಜ್ಞಾನ ಬಳಸಿ ವಿಡಿಯೋ ಹಾಗೂ ಫೋಟೋ ವೈರಲ್ ಮಾಡಿದ್ದರು ಎಂಬುದು ಗೊತ್ತಾಗಿದೆ. ಇದನ್ನೂ ಓದಿ : ದ್ರೌಪದಿ ಮುರ್ಮು ಜೀವನ ಕಥೆ ತೆರೆಗೆ; ನಿರ್ಮಾಣದ ಹೊಣೆ ಹೊತ್ತ ನಟ ಅಮೀರ್ ಖಾನ್

Related posts

ಕೇಂದ್ರ ಸರ್ಕಾರದ ವಿರುದ್ಧ ಈಡುಗಾಯಿ ಚಳವಳಿ; ವಾಟಾಳ್ ನಾಗರಾಜ್ ಘೋಷಣೆ..!

Kalpana Editor

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!

Kalpana Editor

ನನಗೆ ಕೊಟ್ರೆ ರಾಜ್ಯದ KAT, KPSC ಯನ್ನೇ ರದ್ದು ಮಾಡ್ತೇನೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

Kalpana Editor