June 13, 2026
kranthikidi.com
ತಾಜಾಸುದ್ದಿರಾಜ್ಯ

ಪೋಕ್ಸೊ ಪ್ರಕರಣ; ವಚನಾನಂದ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..!

ದಾವಣಗೆರೆ : ಮಠದಲ್ಲಿದ್ದ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಶ್ರೀ ವಿರುದ್ಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು 410 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ವಚನಾನಂದ ಶ್ರೀ ಹಾಗೂ ಅವರ ಆಪ್ತ ಅಶೋಕ್ ವಿರುದ್ಧ 410 ಪುಟಗಳ ವಿವರವಾದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

63 ಸಾಕ್ಷ್ಯಾಧಾರ, ಒಟ್ಟು ನಾಲ್ವರು ಸಂತ್ರಸ್ತ ಬಾಲಕರು, ಸಂತ್ರಸ್ತ ಬಾಲಕನ ತಾಯಿಯ ಹೇಳಿಕೆ, 2022 ರಿಂದ 2025ರವರೆಗೆ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ, ಶಾಲೆಗೆ ಹೋಗುವ ಮುನ್ನ ಮತ್ತು ಬಂದ ನಂತರ ಲೈಂಗಿಕ ದೌರ್ಜನ್ಯ, ಬೆತ್ತಲಾಗಿ ತಲೆಯಿಂದ ಪಾದದವರೆಗೆ ಬಾಲಕರಿಂದ ಎಣ್ಣೆ ಮಸಾಜ್ ಮಾಡಿಸಿಕೊಂಡಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಲಕರ ಮೇಲೆ ಹಲ್ಲೆ ಮಾಡಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಶ್ರೀಗಳ ವಿರುದ್ಧ ಲೈಂಗಿಕ ದೌಜರ್ನ್ಯದ ಗಂಭೀರ ಆರೋಪ ಮಾಡಲಾಗಿದೆ.

ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ಗೆ ವಚನಾನಂದ ಶ್ರೀ ಪರ ವಕೀಲ ಎಸ್.ವಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದು, ತರಾತುರಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕ ಎ.ಎಂ.ಬಸವರಾಜು ವಾದ ಮಂಡಿಸಿದ್ದು, ಹೈಪ್ರೊಫೈಲ್ ಪ್ರಕರಣ ಹಿನ್ನೆಲೆ ಶೀಘ್ರಗತಿಯಲ್ಲಿ ತನಿಖೆ ಮಾಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಯುವ ಅವಶ್ಯಕತೆಯಿದೆ. ಇದನ್ನೂ ಓದಿ : ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; ಆರೆಂಜ್ ಅಲರ್ಟ್​..!

ವಚನಾನಂದ ಶ್ರೀ ಇರುವ ಅದೇ ಸ್ಥಳದಲ್ಲಿ ಸಾಕ್ಷ್ಯಕಲೆ ಹಾಕಬೇಕು. ದೂರುದಾರರು, ಸಂತ್ರಸ್ತರು ಕೋರ್ಟ್‌ಗೆ ಹಾಜರಾಗಿದ್ದು, ನಮಗೆ ಜೀವ ಬೆದರಿಕೆ ಇದೆ ಎಂದು ಆಡಿಯೋ ಪೆನ್‌ಡ್ರೈವ್ ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿತ್ತು. ವಚನಾನಂದ ಶ್ರೀ ಎಫ್‌ಐಆರ್ ದಾಖಲಾಗುವ ಮುನ್ನ ನಿರೀಕ್ಷಣಾ ಜಾಮೀನು ಪಡೆದಿದ್ದರು. ಲಕ್ಷ್ಮೇಶ್ವರ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಾಗಿದೆ. ವಚನಾನಂದ ಶ್ರೀ ಅದೇ ಮಠದ ಮಠಾಧೀಶರು, ಪ್ರಭಾವಿಗಳಾದ ಹಿನ್ನೆಲೆ, ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ ಎಂದಿದ್ದಾರೆ.

Related posts

ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯ ಪ್ರತಿಯೊಬ್ಬ ಕನ್ನಡಿಗನಿಗೆ ಅರ್ಪಣೆ – ಸಿದ್ದರಾಮಯ್ಯ

Kalpana Editor

ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು – ನಟಿ ರಮ್ಯಾ

Kalpana Editor

ಶಿಕ್ಷಕರ ಕಿರುಕುಳ ಆರೋಪ; 4ನೇ ಮಹಡಿಯಿಂದ ಬಿದ್ದು, ವಿದ್ಯಾರ್ಥಿ ಆತ್ಮಹತ್ಯೆ..!

Kalpana Editor