25.3 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಭೀಕರ ಬರವಿದ್ದರೂ ಕೈ ಕಟ್ಟಿ ಕೂತ ಸರ್ಕಾರ; ಸದನದಲ್ಲಿ ರಾಜ್ಯದ ರೈತರ ಧ್ವನಿಯಾಗಿ ಬಿಜೆಪಿ ಹೋರಾಟ – ಬಿ.ವೈ. ವಿಜಯೇಂದ್ರ

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಭೀಕರ ಬರವಿದೆ. ಆದರ ಬಗ್ಗೆ ಗಮನ ಹರಿಸಬೇಕಾದ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ರೈತರಿಗೆ ತೊಂದರೆಯಾಗಿದೆ.

ಆದರೆ, ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಗಮನ ಹರಿಸದೆ ಸುಮ್ಮನೆ ಕುಳಿತಿದೆ ಎಂದರು. ಮುಂಬರುವ ಅಧಿವೇಶನದಲ್ಲಿ ನಾಡಿನ ರೈತರ ಒಳಿತಿಗಾಗಿ ಬಿಜೆಪಿ ಕೆಲಸ ಹೋರಾಡಲಿದೆ. ಸದನದ ಕಲಾಪವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು, ರೈತರ ಧ್ವನಿಯಾಗಿ ಯಾವ ವಿಚಾರಗಳನ್ನು ಮಂಡನೆ ಮಾಡಬೇಕು ಎಂಬ ವಿಷಯಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ರಾಜ್ಯದ ಜನತೆ ಪರವಾಗಿ ಹೋರಾಡಲಿದೆ ಎಂದರು.

ವಿಧಾನಪರಿಷತ್ ಚುನಾವಣೆ – ವಿಧಾನಪರಿಷತ್ ಚುನಾವಣೆ ಸಂಬಂಧವೂ ಮಾತುಕತೆ ನಡೆಸಲಾಯಿತು. ಮುಂದಿನ ಅಕ್ಟೋಬರ್ ನಲ್ಲಿ ವಿಧಾನ ಪರಿಷತ್‍ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಣೆ ಮಾಡಲಾಗಿದೆ. ಇನ್ನು ಒಂದು ಕ್ಷೇತ್ರಕ್ಕೆ ಜೆಡಿಎಸ್ ಜೊತೆ ಸಮಾಲೋಚನೆ ಮಾಡಿ ಘೋಷಣೆ ಮಾಡಲಾಗುವುದು. ಯಾರನ್ನು ಕಣಕ್ಕಿಳಿಸಬೇಕು ಎಂದು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಕೆಪಿಎಸ್‍ಸಿ ಹಗರಣದ ಚರ್ಚೆ – ಕೆಪಿಎಸ್‍ಸಿಯಲ್ಲಿ ನಡೆದಿರುವ ಹಗರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಪಿಎಸ್‍ಸಿಯಿಂದ ಯುವಕರಿಗೆ ದೊಡ್ಡ ಅನ್ಯಾಯವಾಗಿದೆ. ವರ್ಣ ನುಗಟ್ಟಲೆ ಓದಿ, ಶ್ರಮ ಹಾಕಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅವರ ಶ್ರಮಕ್ಕೆ ಸರಿಯಾದ ಫಲ ಸಿಕ್ಕಿಲ್ಲ. ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಪಾದಯಾತ್ರೆ ಗೊಂದಲ ಇಲ್ಲ – ಬಿಡದಿ ಟೌನ್‍ಶಿಪ್ ವಿರುದ್ಧ ನಡೆಸಲು ತೀರ್ಮಾನಿಸಿರುವ ಪಾದಯಾತ್ರೆ ಸಂಬಂಧ ಯಾವುದೇ ಗೊಂದಲ ಇಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ದಿನಾಂಕ ಘೋಷಣೆ ಮಾಡಿದ್ದಾರೆ. ಬಿಡದಿ ಟೌನ್‍ಶಿಪ್ ಬಗ್ಗೆಯೂ ಸದನದಲ್ಲಿ ಮಾತನಾಡುತ್ತೇವೆ ಎಂದು ತಿಳಿಸಿದರು.

ತಮಿಳುನಾಡಿನ ಸಿಎಂಗೆ ಪತ್ರ – ಕಾವೇರಿ ನೀರಿನ ಹಂಚಿಕೆ ಸಂಬಂಧ ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಎರಡೂ ರಾಜ್ಯಗಳ ಜನರು ಒಂದಾಗಿ ಅನ್ಯೋನ್ಯವಾಗಿ ಇರಬೇಕು ಎಂಬುದೇ ಮುಖ್ಯ ಉದ್ದೇಶ. ಕಾವೇರಿ ಮತ್ತು ಮೇಕೆದಾಟು ಬಗ್ಗೆ ಪತ್ರದಲ್ಲಿ ತಿಳಿಸಿದ್ದೇನೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮನಸು ಮಾಡಿದರೆ ಎಲ್ಲ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂದು ಹೇಳಿದರು.

ಬಗೆಹರಿದ ಸರ್ವಜ್ಞ- ತಿರುವಳ್ಳುವರ್ ಪ್ರತಿಮೆ ವಿವಾದ – ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ವಿವಾದ ಭುಗಿಲೆದ್ದಿತ್ತು. ದಶಕಗಳಿಂದ ವಿವಾದ ಬಗೆಹರಿಯದೇ ಹಾಗೇ ಉಳಿದಿತ್ತು. ಬಿಎಸ್‍ವೈ ಅವರು ಮುತುವರ್ಜಿ ವಹಿಸಿ ಅಂದಿನ ತಮಿಳುನಾಡು ಮುಖ್ಯಮಂತ್ರಿಗಳಾದ ಕರುಣಾನಿಧಿ ಅವರ ಜೊತೆ ಮಾತನಾಡಿ ಸೌಹಾರ್ದಯುತವಾಗಿ ವಿವಾದವನ್ನು ಪರಿಹಾರ ಮಾಡಿದ್ದರು.

ಇದೇ ರೀತಿ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮನಸು ಮಾಡಬೇಕಿದೆ ಎಂದರು. ಮೇಕೆದಾಟು ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಸಂಬಂಧ ತಮಿಳುನಾಡಿಗೆ ಅನ್ಯಾಯವಾಗುವುದಿಲ್ಲ. ಮೇಕೆದಾಟು ಜಾರಿಯಾದರೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಮಾತುಕತೆ ನಡೆಸಿ ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ : ಕಾವೇರಿ ನೀರು ನಿರ್ವಹಣೆ; ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ – ಬಸವರಾಜ ಬೊಮ್ಮಾಯಿ

Related posts

ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ – ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಡಿಕೆ ಶಿವಕುಮಾರ್‌

Kalpana Editor

ಇಂದು ಸಚಿವರ ಪಟ್ಟಿ ಪ್ರಕಟ; ಬೇರೆ ದಿನ ಕಾಂಗ್ರೆಸ್ ಭವನ ಶಂಕುಸ್ಥಾಪನೆ – ಡಿ.ಕೆ. ಶಿವಕುಮಾರ್

Kalpana Editor

ಕರ್ನಾಟಕದಲ್ಲೇ ಜನನಾಯಗನ್‌ ಸಿನಿಮಾಗೆ ಸಂಕಷ್ಟ ಎದರು..!

Kalpana Editor