ನವದೆಹಲಿ : ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಕೇಸ್‌ಗೆ ಗುರಿಯಾಗಿದ್ದ ತನ್ನ ಮಗಳನ್ನು ಕ್ಷಮಿಸಿದ್ದಕ್ಕಾಗಿ ಪ್ರಧಾನಿಗೆ ಬಾಲಕಿಯ ತಾಯಿ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಿ ಮೋದಿ ಅವರ ನಡೆಯಿಂದ ನನ್ನ ಮಗಳಿಗೆ ಜೀವದಾನ ಸಿಕ್ಕಿದೆ ಎಂದು 15 ವರ್ಷದ ಬಾಲಕಿಯ ತಾಯಿ ಹೇಳಿದ್ದಾರೆ.
ಪ್ರಧಾನಿ ಮೋದಿ ಈ ದೇಶದ ನಾಯಕ. ಅವರ ಮುಂದೆ ನಾವು ಏನೂ ಅಲ್ಲ. ಅವರನ್ನು ತುಂಬಾ ಕೆಟ್ಟದಾಗಿ ನಿಂದಿಸಿದ ಹುಡುಗಿಯನ್ನು ಕ್ಷಮಿಸುವ ಮೂಲಕ ಅವರು ದೊಡ್ಡತನ ಮೆರೆದಿದ್ದಾರೆ. ನಾನು ಅವರಿಗೆ ಕೈಜೋಡಿಸಿ ಧನ್ಯವಾದ ಹೇಳುತ್ತೇನೆ. ಇಂದು ನನ್ನ ಮಗಳ ಹುಟ್ಟುಹಬ್ಬ. ಆಕೆಗೆ ಪ್ರಧಾನಿ ಮೋದಿ ಅವರಿಂದ ದೊಡ್ಡ ಉಡುಗೊರೆಯೇ ಸಿಕ್ಕಿದೆ. ಅವರು ಆಕೆಗೆ ಜೀವದಾನ ನೀಡಿದ್ದಾರೆ. ನನ್ನ ಮಗಳು ಇಂದು ಹೊಸ ಜೀವನವನ್ನು ಪಡೆದಿದ್ದಾಳೆ ಎಂದು ಆಕೆಯ ತಾಯಿ ತಿಳಿಸಿದ್ದಾರೆ.
ಭಾವನಾತ್ಮಕವಾಗಿ ಮಾತನಾಡಿದ ಮಹಿಳೆ, ಪ್ರಧಾನಿ ಮೋದಿ ಅವರು ನನ್ನ ಮಗಳನ್ನು ದತ್ತು ಪಡೆದು ಆಕೆಯ ಭವಿಷ್ಯಕ್ಕೆ ನೆರವಾಗುವಂತೆ ವಿನಂತಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ನೀಟ್ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಕ್ಕಾಗಿ ಅಪ್ರಾಪ್ತೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಆಕೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ 11,403 ಹುದ್ದೆಗಳ ಬಂಪರ್ ನೇಮಕಾತಿ…!
