24.1 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ನಟ ವಿಜಯ್ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ..!

ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾದ ಎಸ್.ಎ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ ಜಯಮ್ಮ (70) ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಇಂದು (ಜೂನ್ 16) ಬೆಳಗ್ಗೆ ಎಂಬೆಸ್ಸಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವರನಟ ಡಾ ರಾಜ್‌ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್. ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸ್ವಂತ ಸಹೋದರ ಎಸ್.ಎ ಚಿನ್ನೇಗೌಡ, ಜಯಮ್ಮ ಇವರ ಪತ್ನಿ ಜಯಮ್ಮ.

ನಿರ್ಮಾಪಕಿಯೂ ಆಗಿದ್ದ ಜಯಮ್ಮ ಅವರು ಪತಿ ಎಸ್.ಎ ಚಿನ್ನೇಗೌಡ ಅವರೊಂದಿಗೆ ಜೊತೆ ಸೇರಿ 2006 ರಲ್ಲಿ ಮಗ ವಿಜಯ್ ರಾಘವೇಂದ್ರ ನಟನೆಯ ‘ಸೇವಂತಿ ಸೇವಂತಿ’ ಚಿತ್ರವನ್ನ ನಿರ್ಮಿಸಿದ್ದರು.

ಎಸ್‌ ನಾರಾಯಣ್‌ ನಿರ್ದೇಶನದ, ನಾಯಕಿಯಾಗಿ ರಮ್ಯಾ ಅಭಿನಯಿಸಿದ್ದ ‘ಸೇವಂತಿ ಸೇವಂತಿ’ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. 2008ರಲ್ಲಿ ವಿಜಯ್ ರಾಘವೇಂದ್ರ ಅಭಿನಯದ ಫಣಿ ರಾಮಚಂದ್ರ ನಿರ್ದೇಶನದ ‘ಗಣೇಶ ಮತ್ತೆ ಬಂದ’ ಚಿತ್ರವನ್ನ ಜಯಮ್ಮ ಚಿನ್ನೇಗೌಡ ನಿರ್ಮಿಸಿದ್ದರು. ಇದನ್ನೂ ಓದಿ : ಸರ್ಕಾರದಿಂದ ಗ್ಯಾರಂಟಿ ಶಾಕ್; ಪರಿಷ್ಕರಣೆಯಿಂದ ಬರೋಬ್ಬರಿ 100 ಕೋಟಿ ಉಳಿತಾಯ..!

Related posts

ಕಾಕ್ರೋಚ್‌ಗಳ ಮೇಲೆ ಪೊಲೀಸರ ಲಾಠಿಚಾರ್ಜ್‌ – ಕೆಲ ಭಾಗಗಳಲ್ಲಿ ಇಂಟರ್‌ನೆಟ್‌ ಸ್ಥಗಿತ..!

Kalpana Editor

ರಾಮಭಕ್ತರ ಮೇಲೆ ಗುಂಡು ಹಾರಿಸಿದರಿಂದ ಇಂದು ಉಪದೇಶ; ಎಸ್‌ಪಿ ವಿರುದ್ಧ ಯೋಗಿ ಕಿಡಿ..!

Kalpana Editor

ಅಶ್ಲೀಲ ಟ್ರೋಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಧ್ರುವಂತ್

Kalpana Editor