22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಕಾವೇರಿ ವಿವಾದ – ಕುಡಿಯುವ ನೀರು ರಕ್ಷಿಸುವುದು, ನಮ್ಮ ಮೊದಲ ಆದ್ಯತೆ; ಬೊಮ್ಮಾಯಿ

ನವದೆಹಲಿ : ತಮಿಳುನಾಡಿಗೆ ನೀರು ಹರಿಸುವುದಕ್ಕಿಂತ, ಜನರ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾವೇರಿ ನೀರನ್ನು ಕಾಯ್ದಿರಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವ ಉಂಟಾದಾಗಲೆಲ್ಲಾ ನೀರಿನ ವಿವಾದ ಏಳುವುದು ಸಾಮಾನ್ಯ. ಆಗಸ್ಟ್ 2ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ನಾವು ದೃಢವಾದ ನಿಲುವು ತಳೆಯಲಿದ್ದೇವೆ. ದೇಶದಲ್ಲಿ ಎರಡು ರೀತಿಯ ಮುಂಗಾರುಗಳಿವೆ. ಕರ್ನಾಟಕವು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈಋತ್ಯ ಮುಂಗಾರಿನಿಂದ ಮಳೆ ಪಡೆಯುತ್ತದೆ. ಆದರೆ, ಸೆಪ್ಟೆಂಬರ್ ನಂತರ ತಮಿಳುನಾಡು ಈಶಾನ್ಯ ಮುಂಗಾರಿನಿಂದ ಮಳೆ ಪಡೆಯುತ್ತದೆ. ಒಮ್ಮೆ ನೀರು ತಮಿಳುನಾಡಿಗೆ ಹರಿದು ಹೋದರೆ, ಅದನ್ನು ಮತ್ತೆ ಕರ್ನಾಟಕಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ತಮಿಳುನಾಡು ತನ್ನ ಕೃಷಿ ಹಾಗೂ ನೀರಾವರಿ ಉದ್ದೇಶಕ್ಕಾಗಿ ನೀರು ಕೇಳುತ್ತಿದ್ದರೆ, ಕರ್ನಾಟಕವು ತನ್ನ ಜನರ ಮೂಲಭೂತ ಕುಡಿಯುವ ನೀರಿನ ಅಗತ್ಯಕ್ಕಾಗಿ ಹೋರಾಡುತ್ತಿದೆ. ಕಾವೇರಿ ನ್ಯಾಯಾಧಿಕಾರದ ಆದೇಶದಂತೆ ರಚನೆಯಾಗಿರುವ ಪ್ರಾಧಿಕಾರಗಳು ಮತ್ತು ಸಮಿತಿಗಳು ಕರ್ನಾಟಕದಲ್ಲಿ ಉಂಟಾಗಿರುವ ನೀರಿನ ಅಭಾವ ಹಾಗೂ ಕೊರತೆಯನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದರು.

ಆಗಸ್ಟ್ 2ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ನಾವು ದೃಢವಾದ ನಿಲುವು ತಳೆಯಲಿದ್ದೇವೆ. ರಾಜ್ಯದಲ್ಲಿ ಮಳೆ ಹೆಚ್ಚಾಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುವವರೆಗೆ ಕಾಯಬೇಕು. ಅಲ್ಲಿಯವರೆಗೆ ನಮ್ಮ ಕುಡಿಯುವ ನೀರನ್ನು ರಕ್ಷಿಸಿಕೊಳ್ಳುವುದು ಮತ್ತು ಅಗತ್ಯವಿದ್ದರೆ ಕಾನೂನು ಹೋರಾಟವನ್ನು ಮುಂದುವರಿಸುವುದೇ ನಮ್ಮ ಮುಖ್ಯ ತಂತ್ರವಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ : ಕಾವೇರಿ ನೀರಿನ ವಿಚಾರ; ಕಾನೂನು ತಜ್ಞರು, ವಿರೋಧ ಪಕ್ಷಗಳ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿಕೆ ಶಿವಕುಮಾರ್

Related posts

ಇನ್ಮುಂದೆ 15 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಆ್ಯಂಬುಲೆನ್ಸ್…!

Kalpana Editor

ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಅವಿರೋಧ ಆಯ್ಕೆ..!

Kalpana Editor

ತಾಯಿ ಕಳೆದುಕೊಂಡ ಮರಿಯಾನೆ ರೋಧನೆ; ಸೆರೆ ಹಿಡಿಯುವುದೇ ಅರಣ್ಯ ಇಲಾಖೆಗೆ ಸವಾಲು..!

Kalpana Editor