22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಇಂದು ಪ್ರಧಾನಿ ಮೋದಿ ಆಗಮನ; ಮೈಸೂರು ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ..!

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರಿಗೆ ಆಗಮಿಸಲಿದ್ದು, ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟಿಸಲಿದ್ದಾರೆ. ಪ್ರಧಾನಿಗಳ ಭೇಟಿ ಹಿನ್ನೆಲೆ ಮೈಸೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗಗಳಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಭದ್ರತೆ ಗಮನದಲ್ಲಿಟ್ಟುಕೊಂಡು ಸಂಚಾರಕ್ಕೆ ತಾತ್ಕಾಲಿಕ ಸಾರ್ವಜನಿಕರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಡಿಸಿ ಕಚೇರಿ ಜಂಕ್ಷನ್‌ನಿಂದ ಏಕಲವ್ಯ ವೃತ್ತದವರೆಗೆ – ಮುಡಾ ಜಂಕ್ಷನ್‌ನಿಂದ ಡಾ. ಪದ್ಮ ವೃತ್ತದವರೆಗೆ, ಪಡುವಾರಳ್ಳಿ ಜಂಕ್ಷನ್‌ನಿಂದ ಮೆಟ್ರೋಪೋಲ್ ವೃತ್ತದವರೆಗೆ, ರೈಲ್ವೆ ನಿಲ್ದಾಣ ಜಂಕ್ಷನ್‌ನಿಂದ ಆರ್‌ಟಿಒ ವೃತ್ತದವರೆಗೆ, ದಾಸಪ್ಪ ವೃತ್ತದಿಂದ ಹಸು-ಕರು ವೃತ್ತದವರೆಗೆ, ಆಕಾಶವಾಣಿ ವೃತ್ತದಿಂದ ಮಾಲ್ಗುಡಿ ಜಂಕ್ಷನ್‌ವರೆಗೆ..,

ಈ ಮಾರ್ಗಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟ ಹಾಗೂ ಪಾದಚಾರಿಗಳ ಸಂಚಾರಕ್ಕೂ ತಾತ್ಕಾಲಿಕ ನಿರ್ಬಂಧ ಜಾರಿಯಲ್ಲಿರುತ್ತದೆ. ನಗರದ ವಿವಿಧ ಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಈ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಹಾಗೂ ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ : ಬಿಡದಿ ಟೌನ್‌ಶಿಪ್‌ ವಿರೋಧಿಸಿ, ಜೆಡಿಎಸ್‌ ಬೃಹತ್‌ ಪಾದಯಾತ್ರೆ – ಹೆಚ್‌ಡಿಕೆ ಚಾಲನೆ..!

Related posts

ವಿಮಾನ ಪತನ; ಓರ್ವ ಪೈಲಟ್‌, 11 ಸ್ಕೈಡೈವರ್‌ಗಳು ಸಾವು..!

Kalpana Editor

ಹೊರ ಬರಲ್ಲ ಎಂದು ಹಠ ಹಿಡಿದ ವಾಟಾಳ್‌ ಮನೆಯಂಗಳದಲ್ಲೇ ವಶಕ್ಕೆ..!

ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್

Kalpana Editor