22.9 C
ಬೆಂಗಳೂರು
October 10, 2026
kranthikidi.com
ತಾಜಾಸುದ್ದಿರಾಜ್ಯ

ಹೊರ ಬರಲ್ಲ ಎಂದು ಹಠ ಹಿಡಿದ ವಾಟಾಳ್‌ ಮನೆಯಂಗಳದಲ್ಲೇ ವಶಕ್ಕೆ..!

ಬೆಂಗಳೂರು : ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ತಡೆಯೊಡ್ಡುತ್ತಿದ್ದಂತೆ ವಾಟಾಳ್ ನಾಗರಾಜ್ ಅವರು ತಮ್ಮ ನಿವಾಸದ ಗೇಟ್ ಒಳಗಡೆಯೇ ಕುಳಿತು ಪಟ್ಟು ಹಿಡಿದರು. “ನಾನು ಮನೆಯಿಂದ ಆಚೆಯೇ ಬರುವುದಿಲ್ಲ, ವಶಕ್ಕೆ ಪಡೆಯುವ ಕಾರಣಕ್ಕಾಗಿ ಹೊರಬರಲ್ಲ” ಎಂದು ಪಟ್ಟು ಹಿಡಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ಬಾಯಿಗೆ ಸೆಲ್ಲೋ ಟೇಪ್ ಹಾಕಿಕೊಳ್ಳುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ತಡೆಯಲು ಆಗಮಿಸಿದ್ದ ಎಸಿಪಿ ತನ್ವೀರ್ ಹಾಗೂ ಡಿಸಿಪಿ ನೇಮಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸುಮಾರು ಅರ್ಧ ಗಂಟೆಗಳ ಕಾಲ ವಾಟಾಳ್ ನಾಗರಾಜ್ ಅವರ ಮನವೊಲಿಸಲು ತೀವ್ರ ಯತ್ನ ನಡೆಸಿತು.

ಆದರೆ, ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ ವಾಟಾಳ್ ನಾಗರಾಜ್ ಅವರು ಅಧಿಕಾರಿಗಳ ವಿನಂತಿಗೆ ಕೊನೆಗೂ ಜಗ್ಗಲಿಲ್ಲ. ಪೊಲೀಸರ ಮನವೊಲಿಕೆಗೆ ಒಪ್ಪದಿದ್ದಾಗ ಬೇರೆ ಯಾವುದೇ ಆಯ್ಕೆ ಇಲ್ಲದೆ ಕೊನೆಗೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಕರೆದೊಯ್ದರು.

ಇಂದು ಬೆಳಗ್ಗೆಯೇ ವಾಟಾಳ್ ನಾಗರಾಜ್ ಅವರ ನಿವಾಸಕ್ಕೆ ಆಗಮಿಸಿದ್ದ ಬೆಂಬಲಿಗ ನಾರಾಯಣ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದೊಯ್ದರು. ಪೊಲೀಸರ ಈ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು, ಸರ್ಕಾರ ಹಾಗೂ ಪೊಲೀಸರು ಜಂಟಿಯಾಗಿ ಕನ್ನಡಪರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ : ನನಗೆ ನೀರು ಬೇಕು ನಾನು ಮಾತನಾಡುವುದಿಲ್ಲ; ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್

Related posts

ಪಂದ್ಯದ ವೇಳೆಯೇ ಸಿಡಿಲು ಬಡಿದು, ಫುಟ್‌ಬಾಲ್ ಆಟಗಾರ ಸಾವು..!

kknewskannada1987@gmail.com

ಶಿಕ್ಷಕಿ ಬೈದರೆಂಬ ಆರೋಪ; ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿನಿ

Kalpana Editor

ಡಿಕೆ ಶಿವಕುಮಾರ್ ಸರ್ಕಾರದ 2ನೇ ಸಚಿವ ಸಂಪುಟದ ಮಹತ್ವದ ನಿರ್ಣಯಗಳು..!

Kalpana Editor