23 C
ಬೆಂಗಳೂರು
August 6, 2026
kranthikidi.com
ಕ್ರೀಡೆತಾಜಾಸುದ್ದಿವಿದೇಶ

ಪಂದ್ಯದ ವೇಳೆಯೇ ಸಿಡಿಲು ಬಡಿದು, ಫುಟ್‌ಬಾಲ್ ಆಟಗಾರ ಸಾವು..!

ಬ್ಯಾಂಕಾಕ್‌ : ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆದ ಸ್ಥಳೀಯ ಫುಟ್‌ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷ ವಯಸ್ಸಿನ ಥಾಯ್ ಫುಟ್‌ಬಾಲ್ ಆಟಗಾರ ಸೋಫ್ವಾನ್ ಅವಾಯ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಳೆಯ ನಡುವೆಯೂ ಆಟಗಾರರು ಫುಟ್‌ಬಾಲ್ ಆಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದ್ದಕ್ಕಿದ್ದಂತೆ ಮೈದಾನಕ್ಕೆ ಸಿಡಿಲು ಬಡಿದು, ನಂತರ ದೊಡ್ಡ ಸ್ಫೋಟ ಸಂಭವಿಸಿದೆ. ಸಿಡಿಲು ಬಡಿದ ತಕ್ಷಣ ಅವಾಯ್‌ ನೆಲಕ್ಕೆ ಬಿದ್ದರು. ಅದನ್ನು ಕಂಡು ಇತರೆ ಆಟಗಾರರು ಅವಾಯ್‌ ಬಳಿ ಧಾವಿಸಿದರು. ವಿಂಗರ್ ಆಗಿದ್ದ ಅವಾಯ್ ತುರ್ತು ವೈದ್ಯಕೀಯ ತಂಡಗಳ ಪ್ರಯತ್ನಗಳ ಹೊರತಾಗಿಯೂ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ.

ಈ ಘಟನೆಯು ಥಾಯ್-ಮಲೇಷಿಯನ್ ತಂಡಗಳನ್ನು ಒಳಗೊಂಡ ಸ್ಥಳೀಯ ಪಂದ್ಯಾವಳಿಯಾದ ಗೋಲೋಕ್ ಎಫ್‌ಎ ಕಪ್ ಸಮಯದಲ್ಲಿ ಸಂಭವಿಸಿದೆ. ಪಂದ್ಯವು ಅವೇ ತಂಡವಾದ ಸ್ಯಾಮ್‌ಕೋಲ್ಟ್ಸ್ ಮತ್ತು ಅಬು ಎಕ್ಸ್ ನಾಂಗ್ ಸಿರಿನ್ ನಡುವೆ ನಡೆಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಎಲ್ಲೆಡೆಯಿಂದ ಸಂತಾಪಗಳು ವ್ಯಕ್ತವಾಗಿವೆ.

ಇಂತಹ ಹವಾಮಾನ ಪರಿಸ್ಥಿತಿಯಲ್ಲಿ ಪಂದ್ಯಾವಳಿ ನಡೆಸಿರುವುದನ್ನು ಹಲವರು ಪ್ರಶ್ನಿಸಿದ್ದಾರೆ. ಥೈಲ್ಯಾಂಡ್‌ನಲ್ಲಿ ಸಿಡಿಲಿನಿಂದ ಸಾವುಗಳು ಆಗುವುದು ಸಾಮಾನ್ಯ. ರೋಗ ನಿಯಂತ್ರಣ ಇಲಾಖೆಯ ಡೇಟಾ ಪ್ರಕಾರ, 2020 ಮತ್ತು 2024 ರ ನಡುವೆ ದೇಶಾದ್ಯಂತ ಕನಿಷ್ಠ 283 ಜನರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಅವರಲ್ಲಿ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲಿನ ದೌರ್ಜನ್ಯ ಖಂಡನೀಯ..!

Related posts

ಪ್ರಧಾನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಪ್ರಾಮಾಣಿಕತೆಯಿಂದ ಕೂಡಿಲ್ಲ – ವಾಂಗ್ಚುಕ್ ಪತ್ನಿ ವಾಗ್ದಾಳಿ..!

Kalpana Editor

ಒಂದು ಸಣ್ಣ ತಪ್ಪು 40 ದಿನ ಬೆಡ್‌ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್‌

Kalpana Editor

ಡಿಕೆ ಶಿವಕುಮಾರ್ ಸರ್ಕಾರದ 2ನೇ ಸಚಿವ ಸಂಪುಟದ ಮಹತ್ವದ ನಿರ್ಣಯಗಳು..!

Kalpana Editor