23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿಸಿನಿಮಾ

ಅಭಿಮಾನಿಗಳಿಗೆ ಹೆಲ್ತ್ ಕಾರ್ಡ್ ಕೊಡಿಸಿದ ನಟ ಶಿವರಾಜ್ ಕುಮಾರ್

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರು ಇಂದು (ಜುಲೈ 12) ಅಭಿಮಾನಿಗಳೊಟ್ಟಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿಡಿಯೋ ಹಂಚಿಕೊಂಡಿದ್ದ ನಟ ಶಿವರಾಜ್ ಕುಮಾರ್, ಹುಟ್ಟುಹಬ್ಬಕ್ಕೆ ಆಗಮಿಸುವ ಅಭಿಮಾನಿಗಳು ಕಡ್ಡಾಯವಾಗಿ ಕೇಕ್ ಹಾಗೂ ಹಾರಗಳನ್ನು ತರಬಾರದು ಎಂದಿದ್ದರು. ಅದರಂತೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ನಟ ಶಿವರಾಜ್ ಕುಮಾರ್, ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳಿಗೆ ಉಚಿತವಾಗಿ ಹೆಲ್ತ್ ಕಾರ್ಡ್​​ಗಳನ್ನು ವಿತರಣೆ ಮಾಡಿದ್ದಾರೆ. ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಹೆಸರಿನ ಹೆಲ್ತ್ ಕಾರ್ಡುಗಳನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಈ ಹೆಲ್ತ್ ಕಾರ್ಡ್​​ಗಳು ಅವರ ಅಭಿಮಾನಿಗಳು ಮತ್ತು ಅವರ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಬಿಡುಗಡೆ ಮಾಡಲಾಯ್ತು.

ಸುಮಾರು 2500 ಕುಟುಂಬಗಳಿಗೆ ಈ ಹೆಲ್ತ್ ಕಾರ್ಡ್​​ನಿಂದ ಸಹಾಯ ಆಗಲಿದೆ ಎನ್ನಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ಸೌಲಭ್ಯ, ಹೈ ಸ್ಪೀಡ್ ಆಂಬುಲೆನ್ಸ್ ಸೇವೆ, 2029ರ ವರೆಗೆ ಕಾರ್ಡುಗಳು ಮಾನ್ಯವಾಗಿರಲಿವೆ. ಅಭಿಮಾನಿಗಳು ಮಾತ್ರವೇ ಅಲ್ಲದೆ ಅವರ ಕುಟುಂಬಕ್ಕೂ ಕಾರ್ಡ್ ಅನ್ವಯ ಆಗಲಿದೆ.

ನಟ ಶಿವರಾಜ್ ಕುಮಾರ್ ಅವರು ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯ ಜಾಹೀರಾತೊಂದರಲ್ಲಿ ನಟಿಸಿದ್ದರು. ಅದೇ ಆಸ್ಪತ್ರೆಯ ಜೊತೆ ಕೈ ಜೋಡಿಸಿ ಈ ಹೆಲ್ತ್ ಕಾರ್ಡ್​ಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಲ ಮೂಲಗಳ ಪ್ರಕಾರ, ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಉಚಿತ ಹೆಲ್ತ್ ಕಾರ್ಡ್ ಕೊಡಿಸಲೆಂದು ಆಸ್ಪತ್ರೆಯ ಜಾಹೀರಾತಿನಲ್ಲಿ ಉಚಿತವಾಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಕಾರ್ಡ್ ವಿತರಣೆ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, ‘ಇವತ್ತು ನಾನು ಆರೋಗ್ಯದಿಂದ ಇದ್ದೀನಿ ಎಂದರೆ ಅದರಲ್ಲಿ ವೈದೇಹಿ ಆಸ್ಪತ್ರೆಯ ಪಾತ್ರ ಇದೆ. ಆರೋಗ್ಯದ ವಿಷಯದಲ್ಲಿ ಗೋಲ್ಡನ್ ಮಿನಟ್ ಎಂಬುದು ಬಹಳ ಮುಖ್ಯ, ಅದು ಯಾರಿಗೂ ಮಿಸ್ ಆಗಬಾರದು. ನನ್ನ ಅಭಿಮಾನಿಗಳಿಗೆ, ಅವರ ಕುಟುಂಬದ ಆರೋಗ್ಯಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಇತ್ತು. ಹಾಗಾಗಿ ಈ ಜಾಹೀರಾತು ಮಾಡಿ ಹೀಗೊಂದು ಕಾರ್ಯ ಮಾಡಿದೆವು. ಯಾರಿಗೆ ಚಿಕಿತ್ಸೆ ಮಾಡಿಸಲು ಸಾಧ್ಯ ಇದೆಯೋ ಅವರು ಈ ಕಾರ್ಡ್ ತೆಗೆದುಕೊಳ್ಳಬೇಡಿ, ಯಾರಿಗೆ ಆಗುವುದಿಲ್ಲವೋ, ಕುಟುಂಬ ಪರಿಸ್ಥಿತಿ ಸರಿಯಿಲ್ಲವೋ ಅವರಿಗೆ ಕಾರ್ಡ್ ಕೊಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ. ಇದನ್ನೂ ಓದಿ : ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ..!

Related posts

ಕೇಂದ್ರ ಸರ್ಕಾರದ ವಿರುದ್ಧ ಈಡುಗಾಯಿ ಚಳವಳಿ; ವಾಟಾಳ್ ನಾಗರಾಜ್ ಘೋಷಣೆ..!

Kalpana Editor

ಜಾನಪದ ಲೋಕಕ್ಕೆ ನಷ್ಟ – ವೀರಗಾಸೆ ಕಲಾರತ್ನ ಮಹದೇವಪ್ಪ ನಿಧನಕ್ಕೆ ಚೆಲುವರಾಯಸ್ವಾಮಿ ಸಂತಾಪ..!

Kalpana Editor

ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ಹುದ್ದೆಗಳಿಗೆ ಅರ್ಜಿ ಆಹ್ವಾನ..!

Kalpana Editor