20.4 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಹನೂರು ಪ್ರಕರಣ; ನ್ಯಾಯಾಂಗ ತನಿಖೆಗೆ ಆರ್​​. ಅಶೋಕ್​​ ಆಗ್ರಹ..!

ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್​​.ಅಶೋಕ್​​ ಆಗ್ರಹಿಸಿದ್ದಾರೆ. ಹನೂರಿನಲ್ಲಿ ಮೂವರು ರೈತರ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತರಗಳೇ ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡುತ್ತದೆ.

ಈ ಸ್ಥಳೀಯ ಜನಪ್ರತಿನಿಧಿಗಳ ಹೇಳಿಕೆ ಮತ್ತೊಂದು ಕಥೆ ಹೇಳುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತುಗಳಲ್ಲೂ ಅನುಮಾನಗಳಿಗೆ ಉತ್ತರ ಸಿಗುತ್ತಿಲ್ಲ. ಹಾಗಾದರೆ ನಿಜವಾದದ್ದು ಯಾವುದು? ಯಾರ ಮಾತನ್ನು ನಂಬಬೇಕು? ಎಂದವರು ಪ್ರಶ್ನಿಸಿದ್ದಾರೆ. ಪ್ರಾಣಿ ಕೊಂದು ಮಾಂಸ ಮಾರಾಟಕ್ಕೆ ಹೋಗುತ್ತಿದ್ದರು , ಹೀಗಾಗಿ ಮೂವರನ್ನು ಎನ್​ಕೌಂಟರ್ ಮಾಡಿದ್ದೇವೆ ಅಂತಾರೆ. ಆದರೆ ಹತ್ಯೆಯಾದವರ ಸಂಬಂಧಿಕರು ನಕಲಿ ಎನ್​ಕೌಂಟರ್ ಅಂತಾರೆ. ಕಳೆದ 10 ವರ್ಷದಲ್ಲಿ ಮೊದಲ ಬಾರಿಗೆ ಅರಣ್ಯದಲ್ಲಿ ಹೀಗಾಗಿದೆ.

ದಾಳಿ ನಡೆಸಿದರೆ ಮೊದಲು ಅವರ ಕಾಲಿಗೆ ಗುಂಡು ಹಾರಿಸಬೇಕು. ಆದರೆ ಎದೆಗೆ ಗುಂಡು ಹಾರಿಸಿರುವುದಾಗಿ ಕುಟುಂಬದವರು ಹೇಳ್ತಾರೆ. ಘಟನೆ ಸಂಬಂಧ ತಾನು ಎಸ್​ಪಿ ಜೊತೆ ಮಾತನಾಡಿದ್ದು, ಮಹಜರು ಮಾಡಿಲ್ಲ ಅಂದಿದ್ದಾರೆ. ಪೊಲೀಸರು ಮಹಜರು ಮಾಡುವುದಕ್ಕಿಂತ ಮುನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶವಗಳನ್ನು ಸ್ಥಳಾಂತರ ಮಾಡಿದ್ಯಾಕೆ? ಹತ್ಯೆಯಾದವರ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಮೂವರನ್ನು ಶೂಟೌಟ್ ಮಾಡಿದವರು ಕೂಡ ಈಗ ಕಾಣೆಯಾಗಿದ್ದಾರೆ.

ಅವರೇ ಹೋಗಿ ಶರಣಾಗಬೇಕಿತ್ತು, ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಅರಣ್ಯ ಸಿಬ್ಬಂದಿ ಹೇಳಿಕೆಗೂ, ನಾಗರಿಕರ ಹೇಳಿಕೆಗೂ ವ್ಯತ್ಯಾಸವಿದೆ ಎಂದು ಅಶೋಕ್​​ ಕಿಡಿ ಕಾರಿದ್ದಾರೆ. ಮೂವರ ಹತ್ಯೆ ಬಗ್ಗೆ ಸಿಎಂ ಮ್ಯಾಜಿಸ್ಟ್ರೆಟ್ ತನಿಖೆಗೆ ಆದೇಶಿಸಿದ್ದಾರೆ. ಆದರೆ ಎಲ್ಲರೂ ಅವರ ಪರವಾಗಿಯೇ ಇರುತ್ತಾರೆ. ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ಆಗಬೇಕು. ತನಿಖೆ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಕರ್ತವ್ಯದಿಂದ ಮುಕ್ತಿಗೊಳಿಸಬೇಕು.

ಗುಂಡಿನ ದಾಳಿ ನಡೆಸುವ ಅನಿವಾರ್ಯತೆ ಇತ್ತಾ ಅನ್ನೋದು ಪ್ರಶ್ನೆಯಾಗಿದ್ದು, ಒಬ್ಬರಿಗೆ ಹೊಡೆದ್ರೆ ಜೊತೆಗಿದ್ದವರು ಪರಾರಿಯಾಗುತ್ತಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಹೊಡೆದುರುಳಿಸಿದ್ದಾರೆ. ಎಲ್ಲರ ಕೈಯಲ್ಲೂ ವೆಪನ್ ಇದ್ವಾ? ಎಂಬುದು ನಾವು ಕೇಳುತ್ತಿರುವ ಪ್ರಶ್ನೆ. ಘಟನೆ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿತ್ತು. ಧರಣಿ ಸ್ಥಳಕ್ಕೆ ಭೇಟಿ ನೀಡಿ ನ್ಯಾಯಕೊಡಿಸುತ್ತೇನೆಂದು ಹೇಳಬೇಕಿತ್ತು ಎಂದು ಅಶೋಕ್​​ ತಿಳಿಸಿದ್ದಾರೆ. ಇದನ್ನೂ ಓದಿ : RPF ಸಿಬ್ಬಂದಿ ಬಟ್ಟೆ ಬಿಚ್ಚಿ, ರೇಜರ್‌ನಿಂದ ಹಲ್ಲೆ; ನಟಿ ಅಂತರಾ ಬ್ಯಾನರ್ಜಿ ಅರೆಸ್ಟ್‌..!

Related posts

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚೀನಾ ರಾಕೆಟ್‌ ಪತನ..!

kknewskannada1987@gmail.com

ಆರಾಮವಾಗಿ ನಿದ್ರಿಸಲು ರಾತ್ರಿ ಸಮಯದಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ..!

Kalpana Editor

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ; ಸಿಟಿ ರವಿ ನೇತೃತ್ವದ ಸಮಿತಿಯಿಂದ ಬಿವೈವಿಗೆ ವರದಿ ಸಲ್ಲಿಕೆ..!

Kalpana Editor