ಬೆಂಗಳೂರು : ದರ್ಶನ್ ಅಭಿಮಾನಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆ ಇತ್ತೀಚೆಗೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ‘ಡಿ ಬಾಸ್’ ಎಂದು ಜೈಕಾರ ಹಾಕಿದ್ದು, ಇದಕ್ಕೆ ವಿಜಯಲಕ್ಷ್ಮಿ ನಯವಾಗಿ ಆಕ್ಷೇಪ ವ್ಯಕ್ತಪಡಿಸಿ, ‘ಡಿ ಬಾಸ್’ ಎಂಬ ಘೋಷಣೆ ಬೇಡ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ.
ವಿಜಯಲಕ್ಷ್ಮಿ ಮದುವೆ ಮನೆಗೆ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ದರ್ಶನ್ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್..’ ಎಂದು ಜೈಕಾರ ಹಾಕಿದ್ದಾರೆ. ಈ ವೇಳೆ ವಿಜಯಲಕ್ಷ್ಮಿ ನಗುಮುಖದಲ್ಲೇ ಅಭಿಮಾನಿಗಳಿಗೆ ನಯವಾಗಿ ಬುದ್ಧಿ ಹೇಳಿದ್ದಾರೆ. ʻಎಲ್ಲಾ ಕಡೆ ಇದೇ ತೊಂದರೆ ಆಗ್ತಿರೋದು. ಇದನ್ನು ನಿಲ್ಲಿಸಬೇಕು ಡಿ ಬಾಸ್ ಅನ್ನೋ ಘೋಷಣೆ ಬೇಡʼ ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ಹೇಳಿದ್ದಾರೆ.
ವಧು-ವರರಿಗೆ ಶುಭಾಶಯ ಹೇಳಲು ಬಂದಿದ್ದ ವಿಜಯಲಕ್ಷ್ಮಿ ಅವರ ಮುಂದೆ ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗಿದಾಗ, ನಗುತ್ತಲೇ ಆಕ್ಷೇಪ ವ್ಯಕ್ತಪಡಿಸಿ ಅಭಿಮಾನಿಗಳನ್ನು ಸುಮ್ಮನಾಗಿಸಿದ್ದಾರೆ. ಇದನ್ನೂ ಓದಿ : ಕೊತ್ತಂಬರಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು
