27 C
ಬೆಂಗಳೂರು
August 26, 2026
kranthikidi.com
ತಾಜಾಸುದ್ದಿದೇಶ

ನೀಟ್ ಅಭ್ಯರ್ಥಿಗಳಿಗೆ ತೊಂದರೆ ತಪ್ಪಿಸಲು ಏರ್‌ಪೋರ್ಟ್‌ನಲ್ಲೇ ಕಾಲ ಕಳೆದ ಪ್ರಧಾನಿ ಮೋದಿ

ನವದೆಹಲಿ : ನೀಟ್‌ ಅಭ್ಯರ್ಥಿಗಳಿಗೆ ತೊಂದರೆ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ವಿಮಾನ ನಿಲ್ದಾಣದಲ್ಲೇ 45 ನಿಮಿಷಗಳ ಕಾಲ ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿದ್ದರು. ಮೋದಿಯವರು ಯೋಗ ದಿನಾಚರಣೆ ಮುಗಿಸಿ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಈ ವೇಳೆ ವಿದ್ಯಾರ್ಥಿಗಳು ನೀಟ್-ಯುಜಿ ಮರು ಪರೀಕ್ಷೆಗೆ ತೆರಳುತ್ತಿದ್ದರು. ಇದರಿಂದ ಸಂಚಾರ ಸುಗಮವಾಗಿಡಲು ಮತ್ತು ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಅಧಿಕೃತ ಮಾಹಿತಿಯ ಪ್ರಕಾರ, ಮಧ್ಯಾಹ್ನ 1:15ರ ಸುಮಾರಿಗೆ ಮೋದಿಯವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದರು. ನೀಟ್ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ಅವರ ಪ್ರಯಾಣದ ವೇಳೆ ಭದ್ರತೆ ದೃಷ್ಟಿಯಿಂದ ಬೇರೆ ವಾಹನಗಳಿಗೆ ಮಾರ್ಗ ಮುಚ್ಚಲಾಗಿರುತ್ತದೆ. ಇದರಿಂದ ಪರೀಕ್ಷೆಗೆ ತೆರಳುವವರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು.

ಅದಕ್ಕಾಗಿ ತಕ್ಷಣ ಅವರು ತಮ್ಮ ನಿವಾಸಕ್ಕೆ ತೆರಳದೆ ವಿಮಾನ ನಿಲ್ದಾಣದಲ್ಲಿಯೇ ಸ್ವಲ್ಪ ಹೊತ್ತು ಇರಲು ನಿರ್ಧರಿಸಿದರು. ನೀಟ್-ಯುಜಿ ಮರುಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ನಂತರ, ವಿಮಾನ ನಿಲ್ದಾಣದಿಂದ ತಮ್ಮ ನಿವಾಸಕ್ಕೆ ಅವರು ತೆರಳಿದರು. ಇದನ್ನೂ ಓದಿ : ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭಿಸುತ್ತೇವೆ – ಸಿಎಂ ಡಿಕೆಶಿ

Related posts

ಮಾನದಂಡಗಳ ಅನ್ವಯವೇ ಶಾಶ್ವತ ನಿವಾಸ ಪ್ರಮಾಣಪತ್ರ – ಅಕ್ರಮ ನಿವಾಸಿಗಳು ಹೊರಕ್ಕೆ; ಡಿಸಿಎಂ ಜಿ.ಪರಮೇಶ್ವರ್

Kalpana Editor

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 23ನೇ ಕಂತು ಇಂದು ಬಿಡುಗಡೆ; ಅರ್ಹ ರೈತರ ಖಾತೆಗೆ ಹಣ ಜಮೆ

Kalpana Editor

ಉಪವಾಸ ಸತ್ಯಾಗ್ರಹ ಹಿಂಪಡೆಯಲು, ಷರತ್ತುಗಳನ್ನು ವಿಧಿಸಿದ ಸೋನಮ್ ವಾಂಗ್ಚುಕ್

Kalpana Editor