28.2 C
ಬೆಂಗಳೂರು
July 11, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಲ್ಲಿ ಕಸದ ಗಾಡಿಗಳ ಟ್ರ್ಯಾಕ್‌ಗೆ ಹೊಸ ರೂಟ್; ಕೋರಮಂಗಲದಲ್ಲಿ ಪ್ರಾಯೋಗಿಕ ಆ್ಯಪ್‌ಗೆ ಚಾಲನೆ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ಗಾಡಿಗಳ ಕಳ್ಳಾಟ ಬಟಾಬಯಲಾಗಿದೆ. ಶೇ.50ರಷ್ಟು ಕಸದ ಗಾಡಿಗಳು ಫೀಲ್ಡ್‌ಗೆ ಇಳಿಯದೇ ಇದ್ರೂ ಬಿಲ್ ಮಾತ್ರ ಲೂಟಿ ಮಾಡುತ್ತಿದ್ದಾರೆ. ಹೀಗೆ ಅಡ್ಡದಾರಿಯಲ್ಲಿ ದುಡ್ಡು ಮಾಡಲು ನಿಂತವರು ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕೊಂಡಿದ್ದಾರೆ. ಈ ಕಳ್ಳಾಟಕ್ಕೆ ಬ್ರೇಕ್ ಹಾಕಲು ಜಿಬಿಎ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ.

ಬೆಂಗಳೂರಿನಲ್ಲಿ ಕಸದ ಗಾಡಿಗಳ ಕಳ್ಳಾಟಕ್ಕೆ ಜನರೇ ಸುಸ್ತಾಗಿದ್ದಾರೆ. ಜಿಬಿಎ ಅಧಿಕಾರಿಗಳಿಗೆ ಈ ಕಳ್ಳಾಟ ಗೊತ್ತಿಲ್ಲದ ವಿಚಾರವಲ್ಲ. ಆದರೆ ಇದುವರೆಗೆ ಸೈಲೆಂಟ್ ಆಗಿದ್ದ ಅಧಿಕಾರಿಗಳು ಈಗ ಅಲರ್ಟ್ ಆಗಿದ್ದಾರೆ. ಆಟೋಗಳ ಮೇಲೆ ನಿಗಾ ಇಡಲು ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಚಾಲನೆ ಕೊಟ್ಟಿದ್ದಾರೆ. ನಗರದಲ್ಲಿ ಇನ್ಮುಂದೆ ಕಸದ ಗಾಡಿಗಳ ಲೈವ್ ಟ್ರ‍್ಯಾಕಿಂಗ್ ನಡೆಯಲಿದೆ.

ರಾಜಧಾನಿಯಲ್ಲಿ ಇನ್ಮುಂದೆ ಕಸದ ವಿಚಾರಕ್ಕೆ ಕಳ್ಳಾಟ ನಡೆಯೋದಿಲ್ಲ. ಕಸದ ಗಾಡಿಗಳ ಲೈವ್ ಟ್ರ‍್ಯಾಕಿಂಗ್‌ಗೆ ಆ್ಯಪ್ ಸಜ್ಜಾಗಿದೆ. ಹೀಗೆ ಹೊಸ ಮೊಬೈಲ್ ಅಪ್ಲಿಕೇಶನ್ ಮೂಲಕ ಕಸದ ವಾಹನಗಳ ಮೇಲೆ ಕಣ್ಣಿಡಲು ಪ್ಲಾನ್ ರೆಡಿ ಆಗಿದೆ. ಕಸದ ಕಳ್ಳಾಟಕ್ಕೆ ಬ್ರೇಕ್ ಹೇಗೆ? – ಆಟೋಗಳ ಲೈವ್ ಟ್ರ‍್ಯಾಕಿಂಗ್ ಮಾಹಿತಿ ಸಂಗ್ರಹ – ಕಸದ ಆಟೋ ನಿಗದಿತ ಸಮಯಕ್ಕೆ ಕೆಲಸ ಮಾಡುತ್ತಾ? – ಕಸದ ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ? – ಎಷ್ಟು ದೂರ ಕ್ರಮಿಸಿವೆ, ಎಷ್ಟು ಗಂಟೆ ಕೆಲಸ ಮಾಡಿದೆ? – ಜಿಪಿಎಸ್ ಟ್ರ‍್ಯಾಕಿಂಗ್ ತಂತ್ರಜ್ಞಾನ ಹೊಂದಿರುವ ಅಪ್ಲಿಕೇಶನ್ – ಪ್ರಸ್ತುತ 25 ಕಸದ ಆಟೋ ಚಾಲಕರ ಮೊಬೈಲ್‌ಗೆ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ : ಸದಾ ಸುದ್ದಿಯಲ್ಲಿರಲು ಆರ್‌ಎಸ್‌ಎಸ್‌ ವಿರುದ್ಧ ಟೀಕಿಸುವ ಪ್ರಿಯಾಂಕ್ ಖರ್ಗೆ – ಶೋಭಾ ಕರಂದ್ಲಾಜೆ

Related posts

ಒಂದು ಸಣ್ಣ ತಪ್ಪು 40 ದಿನ ಬೆಡ್‌ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್‌

Kalpana Editor

‘ಕುಂಕುಮ ಭಾಗ್ಯ’ ಹಿಂದಿ ನಟಿ ಸಂಚಿತಾ ಉಗಲೆ ನೇಣಿಗೆ ಶರಣು

Kalpana Editor

2ನೇ ಬಾರಿಗೆ ದರ ಏರಿಕೆ ಬಿಸಿ – ಸಿಎನ್‌ಜಿ ಬೆಲೆ ಮತ್ತೆ 2 ರೂ. ಹೆಚ್ಚಳ..!

Kalpana Editor