25.1 C
ಬೆಂಗಳೂರು
October 6, 2026
kranthikidi.com
ತಾಜಾಸುದ್ದಿದೇಶ

ಮುಂಬೈನಲ್ಲಿ ಭಾರೀ ಮಳೆಯ ಅಬ್ಬರ; ಜನಜೀವನ ಅಸ್ತವ್ಯಸ್ತ..!

ಮುಂಬೈ : ನೆನ್ನೆ (ಮಂಗಳವಾರ) ರಾತ್ರಿ ಸುರಿದ ಭಾರೀ ಮಳೆಯಿಂದ ಮುಂಬೈನ ಹಲವು ಭಾಗಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹಲವೆಡೆ ಮರಗಳು ಉರುಳಿಬಿದ್ದಿದ್ದು, ಕೆಲವು ಪ್ರದೇಶಗಳಲ್ಲಿ ಗೋಡೆ ಕುಸಿತದ ಘಟನೆಗಳೂ ವರದಿಯಾಗಿವೆ. ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ನೀಡಿದ್ದು, ಮುಂದಿನ 48 ಗಂಟೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಮಂಗಳವಾರ ರಾತ್ರಿ 8:30 ರಿಂದ ಬುಧವಾರ ಬೆಳಗ್ಗೆ 5:30ರ ನಡುವೆ ರಾಮ ಮಂದಿರ, ಕೊಲಾಬಾ ಹಾಗೂ ಸಾಂತಾಕ್ರೂಜ್ ಪ್ರದೇಶಗಳಲ್ಲಿ 200 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ರಾಮ ಮಂದಿರದಲ್ಲಿ 224 ಮಿ.ಮೀ., ಕೊಲಾಬಾದಲ್ಲಿ 218.5 ಮಿ.ಮೀ. ಹಾಗೂ ಸಾಂತಾಕ್ರೂಜ್‌ನಲ್ಲಿ 210.6 ಮಿ.ಮೀ. ಮಳೆಯಾಗಿದೆ.ಗಾಯಗೊಂಡಿದ್ದಾರೆ.

ಭಾರೀ ಮಳೆಯಿಂದ ರೈಲು ಸಂಚಾರಕ್ಕೂ ಹೊಡೆತ ಬಿದ್ದಿದೆ. ತುರ್ಭೆ ಮತ್ತು ಕೋಪರ್ಖೈರನೆ ನಿಲ್ದಾಣಗಳ ನಡುವೆ ಹಳಿ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಕೆಲಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ನಂತರ ಹಳಿಯನ್ನು ದುರಸ್ತಿ ಮಾಡಿ ರೈಲು ಸಂಚಾರವನ್ನು ಪುನರಾರಂಭಿಸಲಾಯಿತು.

ಆದರೆ, ಪರಿಸ್ಥಿತಿ ಇದೀಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ನೀರು ನಿಂತಿದ್ದ ಹಲವು ಪ್ರದೇಶಗಳಲ್ಲಿ ನೀರು ಇಳಿದಿದ್ದು, ಸಂಚಾರವೂ ಸಾಮಾನ್ಯಗೊಂಡಿದೆ. ಮಳೆ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ನಗರದಲ್ಲಿ ನಾಗರಿಕ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಕಟ್ಟೆಚ್ಚರ ವಹಿಸಿ, ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿವೆ ಎನ್ನಲಾಗಿದೆ. ಇದನ್ನೂ ಓದಿ : ಡ್ಯೂಟಿಯಲ್ಲಿರುವಾಗಲೇ ಹೃದಯಾಘಾತ; ಪೊಲೀಸ್ ಕಾನ್ಸ್‌ಟೇಬಲ್ ಸಾವು..!

Related posts

ನಟಿ ಸಮಂತಾ ಪ್ರೆಗ್ನೆನ್ಸಿ ಗ್ಲೋ ನೋಡಿ ನೆಟ್ಟಿಗರು ಫಿದಾ..!

kknewskannada1987@gmail.com

ಪ್ರಯಾಣಿಕರ ಗಮನಕ್ಕೆ; ನಾಳೆ ಮುಂಜಾನೆ ಬೆಳಿಗ್ಗೆಯಿಂದಲೇ ಮೆಟ್ರೋ ಸೇವೆ ಆರಂಭ..!

Kalpana Editor

ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ..!

kknewskannada1987@gmail.com