July 13, 2026
kranthikidi.com
ತಾಜಾಸುದ್ದಿಸಿನಿಮಾ

ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಕಾಯಿಲೆ; ಆ ಸಮಸ್ಯೆ ಬಗ್ಗೆ ವಿವರ..!

ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ದೀರ್ಘಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋಗುವಾಗ ಅವರು ಸಹಾಯಕರ ನೆರವು ಪಡೆದರು. ಈ ವಿಡಿಯೋ ನೋಡಿ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಕಾ ಯಾಗ್ನಿಕ್ ಅವರಿಗೆ ಅಪರೂಪದ ಶ್ರವಣ ದೋಷ ಕಾಣಿಸಿಕೊಂಡಿದೆ. ಇದನ್ನು ‘ಸೆನ್ಸೋರಿನೂರಲ್ ಹಿಯರಿಂಗ್ ಲಾಸ್’ ಎಂದು ಕರೆಯಲಾಗುತ್ತದೆ. 2024ರಲ್ಲಿ ತಮಗೆ ಈ ಕಾಯಿಲೆ ಇರುವುದನ್ನು ಅವರು ಬಹಿರಂಗಪಡಿಸಿದ್ದರು. ವಿಮಾನದಿಂದ ಕೆಳಗೆ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಕಿವಿ ಕೇಳಿಸದಂತಾಗಿತ್ತು. ವೈರಲ್ ಇನ್ಫೆಕ್ಷನ್ ಕಾರಣದಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಿವಿಯ ಒಳಭಾಗ ಅಥವಾ ಶ್ರವಣ ನರಗಳಿಗೆ ಹಾನಿಯಾದಾಗ ಈ ಶ್ರವಣ ದೋಷ ಉಂಟಾಗುತ್ತದೆ. ಇದರಿಂದಾಗಿ ಶಬ್ದಗಳನ್ನು ಸರಿಯಾಗಿ ಗ್ರಹಿಸಲು ಮೆದುಳಿಗೆ ಸಾಧ್ಯವಾಗುವುದಿಲ್ಲ. ವಯಸ್ಸಾಗುವುದು ಮತ್ತು ಸೋಂಕುಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಅಲ್ಕಾ ಅವರ ವಿಷಯದಲ್ಲಿ ವೈರಲ್ ಅಟ್ಯಾಕ್ ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಗತ್ಯವಾಗಿರುತ್ತದೆ.

ಈ ಕಾಯಿಲೆಯಿಂದಾಗಿ ಅಲ್ಕಾ ಯಾಗ್ನಿಕ್ ಅವರ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸಂಗೀತ ನಿರ್ದೇಶಕರು ಇಂದಿಗೂ ಅವರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಹಾಡುಗಳನ್ನು ರೆಕಾರ್ಡ್ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಮ್ತಿಯಾಜ್ ಅಲಿ ನಿರ್ದೇಶನದ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಮ್ ಕಾಲ್ಜಾ’ ಅವರು ಹಾಡಿದ ಕೊನೆಯ ಹಾಡಾಗಿದೆ. ತಾವೀಗ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವುದಾಗಿ ಅಲ್ಕಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಮನೆಯಲ್ಲಿ ಗೆಳೆಯ ಆತ್ಮಹತ್ಯೆ; ವಿಚಾರ ಪೊಲೀಸರಿಗೆ ತಿಳಿಸಿದ್ದೇ ನಟಿ ಕೃಷಿ ತಾಪಂಡ

Related posts

ದಾಖಲೆ ಬರೆದ ಪ್ರಧಾನಿ ಮೋದಿಗೆ ನಟ ಸುದೀಪ್, ರಿಷಬ್ ಶೆಟ್ಟಿ ಶುಭಾಶಯ..!

Kalpana Editor

ನೀಟ್ ಅಭ್ಯರ್ಥಿಗಳಿಗೆ ತೊಂದರೆ ತಪ್ಪಿಸಲು ಏರ್‌ಪೋರ್ಟ್‌ನಲ್ಲೇ ಕಾಲ ಕಳೆದ ಪ್ರಧಾನಿ ಮೋದಿ

Kalpana Editor

ಜಿಹಾದಿ ಸಂಚು ಬಯಲು: ರಾಮಮಂದಿರ ಸ್ಫೋಟಿಸಲು ಸ್ಕೆಚ್, ಶಸ್ತ್ರಾಸ್ತ್ರ ಹಿಡಿದು ಫೋಟೋಶೂಟ್‌..!

Kalpana Editor