28.2 C
ಬೆಂಗಳೂರು
July 11, 2026
kranthikidi.com
ಉದ್ಯೋಗತಾಜಾಸುದ್ದಿ

7ನೇ ತರಗತಿ ಪಾಸಾಗಿದ್ರೂ ಸಾಕು, ನಿಮಗಿದೆ ಸರ್ಕಾರಿ ಸಂಸ್ಥೆಯಲ್ಲಿ ದುಡಿಯುವ ಅವಕಾಶ..!

ಉದ್ಯೋಗ ಹುಡುಕುತ್ತಿರುವ ಬೆಳಗಾವಿಯ ಮಹಿಳೆಯರಿಗೆ ಇಲ್ಲಿದೆ ಗುಡ್ ನ್ಯೂಸ್! ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಶಿಶುಪಾಲನಾ ಕೇಂದ್ರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅರ್ಹತೆ ಇದ್ದರೆ ಅಥವಾ ನಿಮ್ಮ ಪರಿಚಯದಲ್ಲಿ ಯಾರಾದರೂ ಇದ್ದರೆ ದಯವಿಟ್ಟು ಈ ಮಾಹಿತಿಯನ್ನು ಅವರಿಗೂ ತಲುಪಿಸಿ. ಈ ಕೇಂದ್ರದಲ್ಲಿ ಕೆಲಸ ಖಾಲಿ ಇದೆ.

ಬೆಳಗಾವಿ ಮಹಾನಗರ ಪಾಲಿಕೆಯ ಶಿಶುಪಾಲನಾ ಕೇಂದ್ರಗಳಲ್ಲಿ ಕೆಲಸ ಮಾಡಲು ಆಸಕ್ತ ಮಹಿಳೆಯರಿಗೆ ಉತ್ತಮ ಅವಕಾಶ ಬಂದಿದೆ. ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸಲು ಶಿಶುಪಾಲನಾ ಶಿಕ್ಷಕಿ – 1 ಹಾಗೂ ಶಿಶುಪಾಲನಾ ಸಹಾಯಕಿ – 2, ಒಟ್ಟು 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು.

ಶಿಶುಪಾಲನಾ ಶಿಕ್ಷಕಿ ಹುದ್ದೆಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿದ್ದು, ಶಾಲಾಪೂರ್ವ ಶಿಕ್ಷಣ ತರಬೇತಿ ಪಡೆದಿರಬೇಕು. ಶಿಶುಪಾಲನಾ ಸಹಾಯಕಿ ಹುದ್ದೆಗೆ ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು. ಎರಡೂ ಹುದ್ದೆಗಳಿಗೆ ಅಭ್ಯರ್ಥಿಗಳ ವಯೋಮಿತಿ 20 ರಿಂದ 40 ವರ್ಷದೊಳಗಿರಬೇಕು. ಅಲ್ಲದೆ ಅಭ್ಯರ್ಥಿಗಳು ಸಂಬಂಧಿತ ಶಿಶುಪಾಲನಾ ಕೇಂದ್ರದ ಸಮೀಪದಲ್ಲೇ ವಾಸವಾಗಿರಬೇಕು ಎಂಬ ಷರತ್ತು ಇದೆ.

ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ – ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಜೋಡಿಸಿಕೊಳ್ಳುವುದು ಮುಖ್ಯ. ವಯಸ್ಸಿನ ಪುರಾವೆಗಾಗಿ SSLC ಅಂಕಪಟ್ಟಿ ಅಥವಾ ಜನ್ಮ ಪ್ರಮಾಣಪತ್ರ ಸಲ್ಲಿಸಬೇಕು. ಶಿಕ್ಷಕಿ ಹುದ್ದೆಗೆ 10ನೇ ತರಗತಿ ಅಂಕಪಟ್ಟಿಯ ಜೊತೆಗೆ Pre-School Education / ECCE / NTT ತರಬೇತಿ ಪ್ರಮಾಣಪತ್ರ ಕಡ್ಡಾಯವಾಗಿದೆ. ಸಹಾಯಕಿ ಹುದ್ದೆಗೆ 7ನೇ ಅಥವಾ 10ನೇ ತರಗತಿ ಅಂಕಪಟ್ಟಿ ಸಾಕು. ವಾಸಸ್ಥಳ ಪುರಾವೆಗಾಗಿ ಆಧಾರ್ ಕಾರ್ಡ್, ವೋಟರ್ ID ಅಥವಾ ರೇಷನ್ ಕಾರ್ಡ್ ನೀಡಬೇಕು.

ಇತ್ತೀಚಿನ 3-4 ಪಾಸ್‌ಪೋರ್ಟ್ ಸೈಜ್ ಫೋಟೋಗಳು, ಜಾತಿ ಪ್ರಮಾಣಪತ್ರ (ಮೀಸಲಾತಿ ಅನ್ವಯವಾದಲ್ಲಿ), ಮಕ್ಕಳ ಆರೈಕೆ ಕ್ಷೇತ್ರದಲ್ಲಿ ಅನುಭವ ಇದ್ದಲ್ಲಿ ಅನುಭವ ಪ್ರಮಾಣಪತ್ರ ಮತ್ತು ಗೌರವಧನ ಪಾವತಿಗಾಗಿ ಬ್ಯಾಂಕ್ ಪಾಸ್‌ಬುಕ್ ವಿವರ ಸಹ ಅಗತ್ಯ. ಎಲ್ಲಾ ದಾಖಲೆಗಳ ಮೂಲ ಮತ್ತು ಫೋಟೋಕಾಪಿ ಎರಡನ್ನೂ ತರಬೇಕು. ಇದನ್ನೂ ಓದಿ : ದೇವರ ಮಹೋತ್ಸವ ಕಾರ್ಯಕ್ರಮದಲ್ಲಿ ಊಟ ಸೇವನೆ; 150 ಕ್ಕೂ ಹೆಚ್ಚು ಮಂದಿ ಅಸ್ವಸ್ಥ..!

Related posts

ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ; ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಸುಪ್ರೀಂಗೆ ಅರ್ಜಿ

Kalpana Editor

ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ..!

Kalpana Editor

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್ – ಆಡಿಯೋ ಸಂಚಲನ..!

Kalpana Editor