August 26, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಿನ ಕೆಲವು ಭಾಗದಲ್ಲಿ ಜು. 04, 05 ರಂದು ವಿದ್ಯುತ್‌ ವ್ಯತ್ಯಯ..!

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ʻ66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರʼ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಜು.04 (ಶನಿವಾರ) ರಂದು ವಿದ್ಯುತ್‌ ವ್ಯತ್ಯಯ ಆಗಲಿದೆ. ನಾಳೆ ಬೆಳಗ್ಗೆ 11 ರಿಂದ ಸಂಜೆ 05 ಗಂಟೆ ವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅದೇ ರೀತಿ ʻ66/11 ಕೆ.ವಿ ಕಂಠೀರವ ಉಪ-ಕೇಂದ್ರʼ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಿನ್ನೆಲೆ ಜು.05 ರ ಭಾನುವಾರ ವಿವಿಧ ಪ್ರದೇಶಗಳಲ್ಲಿ ಪವರ್‌ ಕಟ್‌ ಆಗಲಿದೆ. ಅಂದು ಬೆಳಗ್ಗೆ 10 ಗಂಟೆಯಿಂದ 05 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಶನಿವಾರ ಎಲ್ಲೆಲ್ಲಿ ವ್ಯತ್ಯಯ? – ಶೋಭಾ ಸಿಟಿ, ಚೊಕ್ಕನಹಳ್ಳಿ, ಡೊಮಿನೋಸ್ ಪಿಜ್ಜಾ (ಡಿವ್ ಇನ್ ಪ್ಯಾರಡೈಸ್), ನೂರ್ ನಗರ, ಮಾಜಿ ಸೈನಿಕರ ಲೇಔಟ್, ಪೊಲೀಸ್ ಕ್ವಾಟ್ರಸ್, ಆರ್. ಕೆ. ಹೆಗಡೆ ನಗರ, ಶಬರಿ ನಗರ, ನ್ಯೂ ಶಾಂತಿನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಈಸ್ಟರ್ ಹಾರ್ಮೊನಿ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬೋರ್ಡ್, ಬೆಂಚ್ ರಾಯಲ್ ಲೇಔಟ್, ತಿರುಮೇನಹಳ್ಳಿ ಗ್ರಾಮ, ಮಿಟ್ಟಗನಹಳ್ಳಿ, ಕೋಗಿಲು ಗ್ರಾಮ, ಬೆಳ್ಳಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಭಾನುವಾರ ಎಲ್ಲೆಲ್ಲಿ ವ್ಯತ್ಯಯ? – ಕಬ್ಬನ್‌ಪೇಟೆ 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್ ಹಾಗೂ 6ನೇ ಕ್ರಾಸ್, ಚೌಲಗಲ್ಲಿ ಎ, ಬಿ, ಸಿ ಹಾಗೂ ಡಿ ಗಲ್ಲಿ, ಆರ್‌ಬಿಐ, ನೃಪತುಂಗ ರಸ್ತೆ, ಯು.ವಿ.ಸಿ.ಇ., ಕೃಷಿ ಕಚೇರಿ, ಸರ್ಕಾರಿ ಕಲಾ ಮಹಾವಿದ್ಯಾಲಯ, ಮಾರ್ಥಾಸ್ ಆಸ್ಪತ್ರೆ, ಸುಂಕಲ್ಪೇಟೆ, ನಾಗರ್ತಪೇಟೆ ಮುಖ್ಯ ರಸ್ತೆ, ಕೆ.ಎ.ಎಸ್. ಲೇನ್, ಎ ಲೇನ್, ಸಿ ಲೇನ್ ಹಾಗೂ ಡಿ ಲೇನ್, ಪಿ.ಆರ್.ಎಸ್. ಲೇನ್, ಕಬ್ಬನ್ಪೇಟೆ 13ನೇ ಕ್ರಾಸ್, 14ನೇ ಕ್ರಾಸ್ ಹಾಗೂ 15ನೇ ಕ್ರಾಸ್, ಕೆ.ಜಿ. ರಸ್ತೆಯ ಭಾಗ, ಓ.ಟಿ.ಸಿ. ರಸ್ತೆ, ಶಾರದಾ ಥಿಯೇಟರ್ ಹಿಂಭಾಗ, ಎಸ್.ಪಿ. ರಸ್ತೆ, ಎಸ್.ಜೆ.ಪಿ. ರಸ್ತೆ, ಧರ್ಮರಾಯಸ್ವಾಮಿ ದೇವಸ್ಥಾನ ರಸ್ತೆ, ಆದರ್ಶ್ ಶಾಂಗ್ರಿ-ಲಾ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಇದನ್ನೂ ಓದಿ : ಕೆಎಸ್ ಈಶ್ವರಪ್ಪಗೆ ಸಂಕಷ್ಟ ತಂದಿಟ್ಟ, ಆದಾಯ ಮೀರಿ ಆಸ್ತಿ ಗಳಿಕೆ ಕೇಸ್..!

Related posts

MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ..!

Kalpana Editor

ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ; ನಾಲ್ವರ ಅರೆಸ್ಟ್‌..!

Kalpana Editor

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ; ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ..!

Kalpana Editor