August 26, 2026
kranthikidi.com
ಅಡುಗೆತಾಜಾಸುದ್ದಿ

ಮನೆಯಲ್ಲೇ ಸುಲಭವಾಗಿ ಸ್ಪೆಷಲಾಗಿ ಮಾಡಿ ಚಿಕನ್ ಚಾಪ್ಸ್

ಮನೆಯಲ್ಲೇ ಏನಾದರೂ ಸ್ಪೆಷಲ್‌ ಮಾಡಿಕೊಂಡು ತಿನ್ನಬೇಕು ಎನಿಸುತ್ತಿದ್ದೀಯಾ, ಅದರಲ್ಲೂ ನಾನ್ ವೆಜ್ ತಿನ್ನಬೇಕು ಅನಿಸುತ್ತಾ.., ನಾನ್ ವೆಜ್ ನಲ್ಲಿ ವಿಭಿನ್ನವಾಗಿ ಏನಾದರೂ ಮಾಡ್ಬೇಕು ಅನಿಸುತ್ತದೆ. ಹಾಗಾದರೆ, ಚಿಕನ್ ಚಾಪ್ಸ್ ನ ಸುಲಭವಾಗಿ ಮಾಡಿ, ಸವಿಯಿರಿ.

ಬೇಕಾಗುವ ಸಾಮಾಗ್ರಿಗಳು : ಈರುಳ್ಳಿ, ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ಚಕ್ಕೆ-ಲವಂಗ, ಚಿಕನ್, ಎಣ್ಣೆ, ಉಪ್ಪು, ದನಿಯಾ ಪುಡಿ, ಮೆಣಸಿನ ಪುಡಿ.., ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನಾ ಮಿಕ್ಸಿ ಜಾರಿಗೆ ಹಾಕಿ ಮಸಾಲಾ ಅನ್ನು ರುಬ್ಬಿಕೊಳ್ಳಿ.

ಮಾಡುವ ವಿಧಾನ – ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ಚಿಟಿಕೆ ಅರಿಶಿಣ ಮತ್ತು ಚಿಟಿಕೆ ಉಪ್ಪನ್ನು ಹಾಕಿ ನೆನೆಸಿಡಿ. ಇನ್ನೊಂದು ಒಂದು ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಚಿಕ್ಕದಾಗಿ ಹೆಚ್ಚಿಕೊಂಡ 2 ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಫ್ರೈ ಆದ ಮೇಲೆ ತೊಳೆದಿಟ್ಟಿದ್ದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿಕನ್ ಚೆನ್ನಾಗಿ ಫ್ರೈ ಮಾಡಿ.

ಚಿಕನ್ ಹಾಕಿದ ನಂತರ ನೀರಿನಾಂಶ ಬಿಟ್ಟುಕೊಳ್ಳುತ್ತದೆ. ನೀರು ಸಂಪೂರ್ಣವಾಗಿ ಕಡಿಮೆ ಆಗುವವರೆಗೆ ಚಿಕನ್ ಫ್ರೈ ಮಾಡಿಕೊಳ್ಳಿ. ಬಳಿಕ 1 ಚಮಚ ದನಿಯಾ ಪುಡಿ ಮತ್ತು 1 ಚಮಚ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ. ಆನಂತರ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಈಗ ಸ್ಟವ್ ಆಫ್ ಮಾಡಿದರೆ ಚಿಕನ್ ಚಾಪ್ಸ್ ತಿನ್ನಲು ಸಿದ್ಧ. ಇದನ್ನೂ ಓದಿ : ಹಿಟ್ & ರನ್‌ಗೆ ಯುವಕ ಬಲಿ; ಬೈಕ್‌ಗೆ ಡಿಕ್ಕಿ ಹೊಡೆದು ಚಾಲಕ ಎಸ್ಕೇಪ್..!

Related posts

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ 11,403 ಹುದ್ದೆಗಳ ಬಂಪರ್ ನೇಮಕಾತಿ…!

Kalpana Editor

ರಾಷ್ಟ್ರ ಪ್ರಶಸ್ತಿ ಸಿಕ್ಕರೂ ನನಗೆ ಕೆಲಸ ಸಿಗಲಿಲ್ಲ – ಸತ್ಯ ತೆರೆದಿಟ್ಟ ನಟಿ ಕಂಗನಾ

Kalpana Editor

ಮೈಗ್ರೇನ್ ಸಮಸ್ಯೆಗೂ, ಹೃದಯದ ಆರೋಗ್ಯಕ್ಕೂ ಸಂಬಂಧವಿದೆಯೇ..?!

Kalpana Editor