27.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯ

ವಂದೇ ಮಾತರಂಗೆ ಅಪಮಾನ ಆರೋಪ; ಸೋನಿಯಾ ಗಾಂಧಿ ವಿರುದ್ಧ ದೂರು..!

ಮಂಗಳೂರು : ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಮಂಗಳೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಬಿಜೆಪಿ ಮುಖಂಡ ವಿಕಾಸ್ ಪುತ್ತೂರಿನಿಂದ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಲಾಗಿದೆ. ಎಫ್‌ಐಆರ್‌ ದಾಖಲಿಸದಿದ್ದರೆ ಹೈಕೋರ್ಟ್ ಮೂಲಕ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ. ದೂರು ನೀಡಿದ ಬಳಿಕ ವಿಕಾಸ್ ಪುತ್ತೂರು ಮಾತನಾಡಿ, ಇಡೀ ಭಾರತ ದೇಶ 80ನೇ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷ 140 ಕೋಟಿ ಜನರಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂಗೆ ಅವಮಾನವಾಗಿದೆ.

ಧ್ವಜಾರೋಹಣದ ವೇಳೆ ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅವಮಾನ ಮಾಡಿದ್ದಾರೆ. ವಂದೇ ಮಾತರಂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಕ್ರಾಂತಿಗೀತೆ. ರಾಷ್ಟ್ರ ಗಾನವನ್ನ ಪೂರ್ಣ ಪ್ರಮಾಣದಲ್ಲಿ ಪ್ರಸ್ತುತ ಪಡಿಸಬಾರದು. ಅರ್ಧಕ್ಕೆ ನಿಲ್ಲಿಸಬೇಕು ಎಂದು ಅವರು ಸೂಚನೆ ಕೊಟ್ಟಿದ್ದನ್ನು ಇಡೀ ದೇಶದ ಜನತೆ ನೋಡಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ಚಿಹ್ನೆ, ಸಂಕೇತದ ಘನತೆಗೆ ಅಪಮಾನ ಮಾಡೋದು ಕಾನೂನಿನ ಪ್ರಕಾರ ಅಪರಾಧ. ಜನಗಣಮನದಷ್ಟೇ ವಂದೇ ಮಾತರಂಗೆ ಸ್ಥಾನಮಾನ, ಗೌರವ, ಮಾನ್ಯತೆ ಇದೆ. ಈ ನೆಲೆಯಲ್ಲಿ ಸೋನಿಯಾ ಗಾಂಧಿ ಮೇಲೆ ಕಾನೂನಾತ್ಮಕ ಕ್ರಮ ಆಗಬೇಕು. ಭಾರತೀಯ ನ್ಯಾಯ ಸಂಹಿತೆಯ ಆಧಾರದಲ್ಲಿ ಸೆಕ್ಷನ್‌ಗಳನ್ನು ಹಾಕಬೇಕು. ಉರ್ವಾ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದೇವೆ. ಸೋನಿಯಾ ಗಾಂಧಿ ಮೇಲೆ ಎಫ್‌ಐಆರ್ ಮಾಡದೆ ಹೋದರೆ, ಈ ರಾಜ್ಯದಲ್ಲಿ ರಾಷ್ಟ್ರ ವಿರೋಧಿ ಸರ್ಕಾರ ಇದೆ ಎಂದು ಭಾವಿಸಲಾಗುತ್ತೆ ಎಂದು ಎಚ್ಚರಿಸಿದರು.

ಅವರ ಪ್ರಭಾವಕ್ಕೆ ಒಳಪಟ್ಟು ಪೊಲೀಸರು ಎಫ್‌ಐಆರ್ ಮಾಡದೆ ಹೋದರೆ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ. ಖಾಸಗಿ ದೂರಿನ ಮೂಲಕ ಕಾನೂನು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಯಾವಾಗಲೂ ವಂದೇ ಮಾತರಂ ವಿರೋಧಿಸುತ್ತ ಬಂದಿದೆ. 1937ರಲ್ಲಿಯೇ ಕಾಂಗ್ರೆಸ್ ಪೂರ್ಣ ಪ್ರಮಾಣದ ವಂದೇ ಮಾತರಂ ಹಾಡಬಾರದು. ಎಂದು ವಿರೂಪಗೊಳಿಸಿ ಕತ್ತರಿ ಹಾಕಿದ್ದರು ಎಂದು ವಿಕಾಸ್‌ ಪತ್ತೂರು ತಿಳಿಸಿದರು. ಇದನ್ನೂ ಓದಿ : ನಾಗರ ಪಂಚಮಿ ಹಬ್ಬದಕ್ಕೆ ಅರಿಶಿನ ಎಲೆ ಕಡುಬು

Related posts

ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

Kalpana Editor

ಸಿಎಂ ಆದ ಬಳಿಕ ಅಜ್ಜಯ್ಯನ ಮಠಕ್ಕೆ ಭೇಟಿ; ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆಶಿ

Kalpana Editor

ರಾಜ್ಯದ ಪರಿಸ್ಥಿತಿ ಅವಲೋಕಿಸಿ, ಬರಗಾಲ ಪೀಡಿತ ಪ್ರದೇಶ ಘೋಷಣೆ – ಸಿಎಂ ಡಿಕೆಶಿ

Kalpana Editor