August 1, 2026
kranthikidi.com
ತಾಜಾಸುದ್ದಿರಾಜ್ಯ

ಸಿಎಂ ಆದ ಬಳಿಕ ಅಜ್ಜಯ್ಯನ ಮಠಕ್ಕೆ ಭೇಟಿ; ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆಶಿ

ತುಮಕೂರು : ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ ಇಂದು ತಮ್ಮ ಆರಾಧ್ಯದೈವ ಅಜ್ಜಯ್ಯ ಅವರ ತಿಪಟೂರಿನ ನೊಣವಿನಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರು. ವೀರ ಗಂಗಾಧರ ಅಜ್ಜಯ್ಯನ ಗದ್ದಿಗೆಗೆ ವಿಶೇಷ ಪೂಜೆ ಮಾಡಿ, ಅಷ್ಟೋತ್ತರ ಪಾರಾಯಣ, ಸಂಕಲ್ಪ ನೆರವೇರಿಸಿದರು.

ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಸಿಕೇಂದ್ರ ಶಿವಯೋಗೀಶ್ವರರು ಸಿಎಂಗೆ ಸಾಥ್ ನೀಡಿದರು. ಈ ವೇಳೆ, ಕಾರ್ಯಕರ್ತರು 101 ಈಡುಗಾಯಿ ಒಡೆದರು. ಪೂಜೆ ಬಳಿಕ ಮಾತಾಡಿದ ಸಿಎಂ, 24 ವರ್ಷದಿಂದ ನಾನು ಕಾಡಸಿದ್ದೇಶ್ವರ ಮಠಕ್ಕೆ ಬರುತಿದ್ದೇನೆ. ಮಾರ್ಗದರ್ಶನ ಪಡೆದು ದರ್ಶನವನ್ನೂ ಪಡೆದುಕೊಂಡಿದ್ದೇನೆ. ನನಗೂ ಸೇರಿದಂತೆ ರಾಜ್ಯಕ್ಕೆ ಒಳ್ಳೆದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ : ಬಿಜೆಪಿಯಿಂದ ಹೊರಬಂದು ಅಣ್ಣಾಮಲೈ ಆಂದೋಲನ; 14 ಲಕ್ಷ ಜನ ಬೆಂಬಲ..!

ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ. ಮೊದಲು ಭಕ್ತನಾಗಿ ಬಂದು ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದಕ್ಕೂ ಮುನ್ನ ಮಲ್ಲಘಟ್ಟ ಕೆರೆ ಕಾಮಗಾರಿಗೆ ಸಿಎಂ ಚಾಲನೆ ಕೊಟ್ಟಿದ್ದರು. ಈ ಕರೆಗೆ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದೆ. ದೇವರನ್ನು ಇಲ್ಲಿ ಸ್ನಾನ ಮಾಡಿಸಿ ಪೂಜೆ ಮಾಡ್ತಾರೆ. ಇಲ್ಲಿನ ನೀರನ್ನು ನಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದೆ ಎಂದು ಸಿಎಂ ಹೇಳಿದರು. ಯಾವಾಗಲೂ ಕೂಡಾ ಈ ಭಾಗದ ಕೆರೆ ತುಂಬಿ ತುಳುಕಲಿ ಎಂದು ಆಶಿಸಿದರು.

Related posts

ಮಲೆನಾಡು ಭಾಗದಲ್ಲಿ ಭಾರೀ ಮಳೆ; ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ..!

Kalpana Editor

ಕಾವೇರಿ ನೀರಿಗಾಗಿ ಮತ್ತೆ CWRC ಮೊರೆ ಹೋದ ತಮಿಳುನಾಡು; ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಭೆ..!

Kalpana Editor

ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತಾ ಲೋಪ; ಚಿನ್ನ, ಅಮೂಲ್ಯ ವಜ್ರಾಭರಣ ನಾಪತ್ತೆ..!

Kalpana Editor