kranthikidi.com
ತಾಜಾಸುದ್ದಿರಾಜ್ಯ

ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ ತಂದೆ-ಮಗ; ಕೊಡಗಿನ ರೆಸಾರ್ಟ್‌ನಲ್ಲಿ ಜಾಲಿ..!

ಮಡಿಕೇರಿ : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ವಿಶ್ರಾಂತಿ ಪಡೆಯಲು ತಮಿಳುನಾಡಿನ ಮಾಜಿ ಸಿಎಂ ಎಂ.ಕೆ ಸ್ಟಾಲಿನ್ ಹಾಗೂ ಅವರ ಮಗ ಉದಯನಿಧಿ ಕುಟುಂಬಸ್ಥರು ಕೊಡಗಿಗೆ ಆಗಮಿಸಿದ್ದಾರೆ.

ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್ ಒಂದರಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದಾರೆ. ಸ್ಟಾಲಿನ್ ಪತ್ನಿ ದುರ್ಗಾ ಮತ್ತಿತರ ಕುಟುಂಬ ಸದಸ್ಯರು ಅವರೊಂದಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಅವರು ಕೊಡಗಿನ ಪ್ರಕೃತಿ ಮಡಿಲಲ್ಲಿ ವಿಶ್ರಾಂತಿ ಮೂಡ್‌ನಲ್ಲಿ ಇದ್ದಾರೆ.

ಇಂದು ಮತ್ತೆ ನಾಳೆ ಕೊಡಗಿನ ಕೆಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ ತಮಿಳುನಾಡಿನತ್ತ ತೆರಳುವ ಸಾಧ್ಯತೆಯಿದೆ. ಸ್ಟಾಲಿನ್ ಒಂದು ತಿಂಗಳಿಗೂ ಹೆಚ್ಚು ಕಾಲ ತಮಿಳುನಾಡಿನ ರಾಜ್ಯದಾದ್ಯಂತ ಡಿಎಂಕೆ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಚುನಾವಣೆಯ ನಂತರ ಸಣ್ಣ ವಿರಾಮಕ್ಕಾಗಿ ಕೊಡಗಿಗೆ ಅಗಮಿಸಿದ್ದಾರೆ.

Related posts

ಮಂಗಳೂರಿನಲ್ಲಿ ತೈಲ ಸಂಗ್ರಹಾಗಾರ ಸ್ಥಾಪನೆಗೆ ONGC ಅನುಮೋದನೆ..!

Kalpana Editor

ವಿಮಾನ ಪತನ; ಓರ್ವ ಪೈಲಟ್‌, 11 ಸ್ಕೈಡೈವರ್‌ಗಳು ಸಾವು..!

Kalpana Editor

ಜಿಹಾದಿ ಸಂಚು ಬಯಲು: ರಾಮಮಂದಿರ ಸ್ಫೋಟಿಸಲು ಸ್ಕೆಚ್, ಶಸ್ತ್ರಾಸ್ತ್ರ ಹಿಡಿದು ಫೋಟೋಶೂಟ್‌..!

Kalpana Editor