28.9 C
ಬೆಂಗಳೂರು
June 10, 2026
kranthikidi.com
ಕ್ರೀಡೆತಾಜಾಸುದ್ದಿ

ವೈಭವ್ ಸೂರ್ಯವಂಶಿ ಆರ್ಭಟಕ್ಕೆ ದಿಗ್ಗಜರ ದಾಖಲೆಗಳೇ ಧೂಳೀಪಟ..!

ಚಂಡೀಗಢ : ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋತು 19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಹೊರಬಿದ್ದಿದೆ. ಆದರೆ, ಈ ಪಂದ್ಯದಲ್ಲಿ ಆರ್‌ಆರ್‌ ಪರ ಮತ್ತೊಮ್ಮೆ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ 15ರ ಬಾಲಕ ವೈಭವ್‌ ಸೂರ್ಯವಂಶಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ.

ಎಲಿಮಿನೇಟರ್‌, ಕ್ವಾಲಿಫೈಯರ್‌-2 ನಲ್ಲಿ 2 ಬಾರಿ ಶತಕ ಕೈತಪ್ಪಿದರೂ, ದಿಗ್ಗಜರ ದಾಖಲೆಗಳನ್ನು ಧೂಳಿಪಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿ, ಗಮನ ಸೆಳೆದಿದ್ದ ವೈಭವ್, ತಮ್ಮ 2ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಕ್ರಿಕೆಟ್ ಜಗತ್ತು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅತಿ ವೇಗವಾಗಿ 1000 ರನ್ ಹಾಗೂ ಪ್ಲೇಆಫ್‌ನಲ್ಲೇ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಬರೆದಿದ್ದಾರೆ.

ಶುಕ್ರವಾರ (ಮೇ 29) ಜಿಟಿ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ 96 ರನ್ ಬಾರಿಸಿದ್ದು, ಈ ಮೂಲಕ ಕೇವಲ 440 ಎಸೆತಗಳಲ್ಲಿ 1000 ರನ್ ಬಾರಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಅತಿವೇಗವಾಗಿ 1000 ರನ್ ಪೂರೈಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕೆಕೆಆರ್‌ ಆಟಗಾರ ರಸ್ಸೆಲ್‌ ಅವರ ಹೆಸರಿನಲ್ಲಿತ್ತು, ರಸ್ಸೆಲ್‌ 545 ಎಸೆತಗಳಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದ್ದರು.

ವೈಭವ್ ಸೂರ್ಯವಂಶಿ ಐಪಿಎಲ್ 2026ರ ಪ್ಲೇಆಫ್‌ನ ಕೇವಲ ಎರಡು ಪಂದ್ಯಗಳಲ್ಲಿ ಒಟ್ಟು 19 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಮತ್ತೊಂದು ದಾಖಲೆ ಹೆಗಲಿಗೇರಿಸಿಕೊಂಡರು. ಐಪಿಎಲ್ 2026ರ ಪ್ಲೇಆಫ್ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 12 ಸಿಕ್ಸರ್ ಹಾಗೂ ಜಿಟಿ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಒಂದೇ ಆವೃತ್ತಿಯ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿ, ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ದಾಖಲೆ ಮುರಿದಿದ್ದರು. ಕ್ರಿಸ್‌ ಗೇಲ್‌ 2012ರಲ್ಲಿ ಆರ್‌ಸಿಬಿ ಪರ 59 ಸಿಕ್ಸರ್‌ಗಳನ್ನ ಸಿಡಿಸಿದ್ದರು. ಇದೀಗ ವೈಭವ್‌ ಆರ್‌ಆರ್‌ ಪರ 65 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

Related posts

ಪಾಕ್‌ಗೆ ಬಿಸಿ ಮುಟ್ಟಿಸಲು ಮತ್ತೆ ರೆಡಿ; ಭಾರತಕ್ಕೆ ಬಂದಿಳಿದ ಮತ್ತೊಂದು ಸುದರ್ಶನ ಚಕ್ರ

Kalpana Editor

ಮಾಜಿ ಸಿಎಂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ..!

Kalpana Editor

ಶಾಂತಿ ಮಾತುಕತೆ ಬೆನ್ನಲ್ಲೇ ಟ್ರಂಪ್​ಗೆ ಮೊಜ್ತಬಾ ಖಮೇನಿ ಎಚ್ಚರಿಕೆ..!

Kalpana Editor