22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಸೈಟ್ ವಿವಾದ; ಎಸ್‌ಪಿಗಾಗಿ ಕಾದು ಕಾದು ವಾಪಸ್ ಆದ ಯಶ್ ತಾಯಿ

ಹಾಸನ : ವಿದ್ಯಾನಗರದಲ್ಲಿರುವ ನಟ ಯಶ್ ತಾಯಿ ಮಾಲೀಕತ್ವದ ಶೆಡ್, ಕಾಂಪೌಂಡ್ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಾಸನ ಎಸ್‌ಪಿ ಶುಭನ್ವಿತಾ ಅವರನ್ನು ಭೇಟಿಯಾಗಲು ಕಚೇರಿಗೆ ರಾಕಿಂಗ್‌ಸ್ಟಾರ್ ಯಶ್ ತಾಯಿ ಪುಷ್ಪ ಆಗಮಿಸಿದ್ದರು.

ಮೂರು ದಿನಗಳ ಹಿಂದೆ ಪೊಲೀಸ್ ಮಹಾ ನಿರ್ದೇಶಕರನ್ನ ಭೇಟಿಯಾಗಿದ್ದ ಪುಷ್ಪ, ಸುಮಾರು 24 ಲಕ್ಷ ರೂ. ಮೊತ್ತದ ವಸ್ತುಗಳು ಹಾನಿಯಾಗಿದೆ. ಘಟನೆ ಸಂಬಂಧ ದೇವರಾಜ್ ಹಾಗೂ ಧರ್ಮ ಸೇರಿ ಹಲವರ ವಿರುದ್ಧ ದೂರು ನೀಡಿದರೂ ಕೇಸ್ ದಾಖಲು ಮಾಡದೆ ಎನ್‌ಸಿಆರ್ ದಾಖಲು ಮಾಡಿದ್ದಾರೆ ಎಂದು ಹಾಸನ ಬಡಾವಣೆ ಠಾಣೆ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ.

ಇದುವರೆಗೂ ಎಫ್‌ಐಆರ್ ದಾಖಲು ಮಾಡದ ಹಿನ್ನೆಲೆಯಲ್ಲಿ ಡಿಜಿಟಲ್ ಸಾಕ್ಷಿಗಳ ಜೊತೆ ಹಾಸನದ ಜೆಎಂಎಫ್‌ಸಿ ಕೋರ್ಟ್‌ಗೆ ಪುಷ್ಪಾ ಸಂಬಂಧಿ ದುರ್ಗಾಪ್ರಸಾದ್ ಖಾಸಗಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪ್ರಕರಣ ಸಂಬಂಧ ಎಸ್‌ಪಿ ಭೇಟಿಗೆ ಕೋರ್ಟ್ ನಿರ್ದೇಶನ ನೀಡಿದ್ದು ಕೋರ್ಟ್ ಸೂಚನೆಯಂತೆ ಇಂದು ಎಸ್ಪಿ ಭೇಟಿಗೆ ಅವರು ಆಗಮಿಸಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಸಮಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕಾಯ್ದರು. ಎಸ್‌ಪಿ ಸಕಲೇಶಪುರಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ವಾಪಸ್ಸಾದರು.

Related posts

ಟೌನ್‍ಶಿಪ್ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ – ವಿಜಯೇಂದ್ರ

Kalpana Editor

ದೂರದ ದ್ವೀಪ ನೋಡ್ತಿರೋ ದರ್ಶನ್‌ – ಇನ್‌ಸ್ಟಾದಲ್ಲಿ ವಿಜಯಲಕ್ಷ್ಮಿ ಸ್ಟೋರಿ ಪೋಸ್ಟ್‌..!

Kalpana Editor

ನಟ ದರ್ಶನ್​​ಗೆ ಮತ್ತೆ ಶಾಕ್; ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ

kknewskannada1987@gmail.com