21.6 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜ್ಯ

ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ..!

ಬೆಂಗಳೂರು : ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆಯಾಗಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಆರಂಭಿಕ ಮಾತುಗಳನ್ನಾಡಿದರು. ಈ ವೇಳೆ ನಿರ್ಣಯ ಮಂಡಿಸಿದರು. ಸಿಎಲ್‌ಪಿ ನಾಯಕನಾಗಿ ಡಿಕೆಶಿ ಹೆಸರನ್ನು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಅದಕ್ಕೆ ಜಿ.ಪರಮೇಶ್ವರ್ ಅವರು ಅನುಮೋದಿಸಿದರು. ಕೊನೆಗೆ ಡಿಕೆಶಿ ಆಯ್ಕೆಗೆ ಶಾಸಕರು ಕೂಡ ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು.

ಜೊತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಿಸಿದರು. ಸಿದ್ದರಾಮಯ್ಯ ಘೋಷಣೆಗೆ ಪರಮೇಶ್ವರ್ ಅನುಮೋದನೆ ನೀಡಿದರು. ಐದು ನಿಮಿಷದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯಿತು.

ಇದೇ ಹೊತ್ತಲ್ಲಿ ಸಿಎಲ್‌ಪಿ ಸಭೆಗೆ 10 ನಿಮಿಷ ಬ್ರೇಕ್ ತೆಗೆದುಕೊಳ್ಳಲಾಯಿತು. ಈ ವೇಳೆ, ಸಿಎಂ ಕಚೇರಿಗೆ ಕೆ.ಸಿ.ವೇಣುಗೋಪಾಲ್ ಆಗಮಿಸಿದರು. ಡಿಕೆಶಿ ಬಿಟ್ಟು ಸಿಎಂ ಕಚೇರಿಯಲ್ಲಿ ಸಿದ್ದರಾಮಯ್ಯ, ವೇಣುಗೋಪಾಲ್, ಸುರ್ಜೇವಾಲಾ ಪ್ರತ್ಯೇಕವಾಗಿ ಸಭೆ ನಡೆಸಿದರು. ಕೆ.ಸಿ.ವೇಣುಗೋಪಾಲ್‌ ಅವರು ರಾಹುಲ್‌ ಗಾಂಧಿಗೆ ಕರೆ ಮಾಡಿ, ಸಿದ್ದರಾಮಯ್ಯ ರಾಜೀನಾಮೆ ಅಧಿಕೃತವಾಗಿ ತಿಳಿಸಿದರು. ಎಐಸಿಸಿ ಆದೇಶದ ಮೇರೆಗೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪೂರ್ಣಗೊಂಡಿತು. ಸಭೆ ಬಳಿಕ ಮತ್ತೆ ಸಿಎಲ್‌ಪಿ ಸಭೆಯಲ್ಲಿ ಪಾಲ್ಗೊಂಡರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆ ಸುಸೂತ್ರವಾಗಿ ನಡೆಯಿತು. ಈಗ ಡಿ.ಕೆ.ಶಿವಕುಮಾರ್ 10 ನಾಯಕರ ಜೊತೆಗೂಡಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಬುಧವಾರ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Related posts

ಭಾರತೀಯ ಸಿಬ್ಬಂದಿ ಇದ್ದ, ಹಡಗಿನ ಮೇಲೆ ಅಮೆರಿಕ ದಾಳಿ; ಭಾರತ ತೀವ್ರ ಖಂಡನೆ..!

Kalpana Editor

ನಾಳೆಯಿಂದ (ಜು.13) ಬರಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ..!

Kalpana Editor

ಬೆಂಗಳೂರಿನ ಮೊದಲ ಟನಲ್‌ ರಸ್ತೆ ಕಾಮಗಾರಿಗೆ ಇಂದು ಸಿಎಂ ಭೂಮಿಪೂಜೆ

Kalpana Editor