kranthikidi.com
ಕ್ರೈಂತಾಜಾಸುದ್ದಿರಾಜ್ಯ

ಭೀಮಾತೀರದಲ್ಲಿ ಸಾಮೂಹಿಕ ಹತ್ಯೆ ಕೇಸ್‌ – 12 ಆರೋಪಿಗಳ ಅರೆಸ್ಟ್‌..!

ವಿಜಯಪುರ : ಭೀಮಾತೀರದಲ್ಲಿ 6 ಜನರ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ 12 ಜನ ಆರೋಪಿಗಳನ್ನ ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಇಂದು ಇಂಡಿ ಕೋರ್ಟ್‌ಗೆ ಚಡಚಣ ಪೋಲಿಸರು ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ.

ಮೇ 29 ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಹತ್ಯಾಕಾಂಡ ನಡೆದಿತ್ತು. ಡಬಲ್ ಬ್ಯಾರಲ್ ಗನ್‌ನಿಂದ ಗುಂಡು, ಮಚ್ಚುಗಳಿಂದ ಕತ್ತರಿಸಿ 6 ಜನರ ಹತ್ಯೆ ಮಾಡಲಾಗಿತ್ತು.

ಈ ಹತ್ಯಾಕಂಡದಲ್ಲಿ ಚಡಚಣದ ಪ್ರತಿಷ್ಠಿತ ಕುಟುಂಬದ 5 ಜನರ ಹಾಗೂ ಇವರ ಜೊತೆಗೆ ಬಂದಿದ್ದ ಓರ್ವನನ್ನ ಹಂತಕರು ಹತ್ಯೆಗೈದಿದ್ದರು. ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ಶಿವಪುತ್ರ ಮಕ್ಕಳಾದ ರಾಹುಲ್ (25), ಸಮರ್ಥ (23) ಹಾಗೂ ಶಬ್ಬಿರ್ ಅತ್ತಾರ್ (45) ಹತ್ಯೆಗೀಡಾದವರು.

ಈ ಹತ್ಯೆ ಗೋವಿಂದಪುರ ಗ್ರಾಮದ ಅಪ್ಪುಗೌಡ ಪಾಟೀಲ್ ಕುಟುಂಬ ಸದಸ್ಯರಿಂದ ನಡೆದಿದೆ ಎಂದು ನಿರಾಳೆ ಕುಟುಂಬಸ್ಥರು ದೂರು ದಾಖಲಿಸಿದ್ದರು. ಸದ್ಯ ಈ ಹತ್ಯಾಕಾಂಡ ನಡೆಸಿದ್ದವರ ಪೈಕಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Related posts

ಸಿಎಂ ಆದ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಸಿಎಂ ಡಿಕೆ ಶಿವಕುಮಾರ್

Kalpana Editor

KPCC ಪಟ್ಟದ ಮೇಲೆ ಕಣ್ಣಿಟ್ಟ ಸತೀಶ್ ಜಾರಕಿಹೊಳಿ; ಸಿಎಂ, ಡಿಸಿಎಂ ಬೆನ್ನಲ್ಲೇ ದೆಹಲಿಗೆ ದೌಡು..!

Kalpana Editor

ಕೊಪ್ಪಳದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಸಿಎಂ ಡಿಕೆ ಶಿವಕುಮಾರ್​​ಗೂ ಲಿಂಕ್

Kalpana Editor