August 1, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಕಾಂಗ್ರೆಸ್‌ನವರಿಂದಲೇ ಆಡಿಯೋ ರಿಲೀಸ್ – ಆರ್‌.ಅಶೋಕ್‌

ಬೆಂಗಳೂರು : ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಆಡಿಯೋ ರಿಲೀಸ್ ಆಗಿದೆ ಅಂತ ವಿಪಕ್ಷ ನಾಯಕ ಆರ್‌. ಅಶೋಕ್ ಆರೋಪ ಮಾಡಿದ್ದಾರೆ‌. ಮಾಜಿ ಸಚಿವ ಜಮೀರ್ ಅಹಮದ್ ಅವರದ್ದು, ಎನ್ನಲಾದ ಆಡಿಯೋ ವೈರಲ್ ಆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕೋಕೆ ಈ ಆಡಿಯೋ ರಿಲೀಸ್ ಆಗಿದೆ. ಸಿದ್ದರಾಮಯ್ಯ ಗ್ಯಾಂಗ್ ಹುಷಾರಾಗಿ ಇರಬೇಕು. ಚುನಾವಣೆ ಆಗಿ ಎಷ್ಟು ದಿನ ಆಯ್ತು‌. ಈಗ ಯಾಕೆ ರಿಲೀಸ್ ಮಾಡಿದ್ರು.

ಜಮೀರ್‌ಗೆ ಸ್ಥಾನ ತಪ್ಪಿಸೋಕೆ ಕಾಂಗ್ರೆಸ್ ಅವರೇ ಈ ಆಡಿಯೋ ರಿಲೀಸ್ ಮಾಡಿರೋದು. ಉರ್ದು ಭಾಷಣ ಕನ್ನಡ ಅನುವಾದ ಕೊಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಈಗ ದೆಹಲಿಗೆ ಓಡ್ತಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಸಿಗದವರ ಕೈಬಿಟ್ಟ ಗುಂಪು ರಚನೆ ಆಗಲಿದೆ. ಸಚಿವ ಸ್ಥಾನ ಸಿಗದವರದ್ದು ಗುಂಪು‌ ಆಗಲಿದೆ. ಪ್ರಮಾಣ ವಚನಕ್ಕೆ ಮುಗಿದ ಮೇಲೆ ಎಲ್ಲವೂ ಶುರುವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Related posts

ಬೆನ್ನುತಟ್ಟಿ ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

Kalpana Editor

ರಾಷ್ಟ್ರ ಪ್ರಶಸ್ತಿ ಸಿಕ್ಕರೂ ನನಗೆ ಕೆಲಸ ಸಿಗಲಿಲ್ಲ – ಸತ್ಯ ತೆರೆದಿಟ್ಟ ನಟಿ ಕಂಗನಾ

Kalpana Editor

ಗೆಳತಿ ಸಾವಿನ ನೋವಲ್ಲಿ ಸಲ್ಮಾನ್ ಖಾನ್; ಅಂತಿಮ ನಮನ ಸಲ್ಲಿಸಿದ ನಟ

Kalpana Editor