28.9 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿಸಿನಿಮಾ

24 ಕೋಟಿ ಮೌಲ್ಯದ ಜಮೀನು ಖರೀದಿಸಿದ ಯಶ್-ರಾಧಿಕಾ ದಂಪತಿ..!

ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 24 ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಳಿ ಜಮೀನನ್ನು ಖರೀದಿಸಿದ್ದಾರೆ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್ ತಾಲ್ಲೂಕಿನ ಕಾಮತ್ ಗ್ರಾಮದಲ್ಲಿರುವ ಎರಡು ಕೃಷಿ ಜಮೀನುಗಳನ್ನು ಈ ದಂಪತಿ ಖರೀದಿಸಿದ್ದಾರೆ. ಒಟ್ಟು 5,289 ಚದರ ಮೀಟರ್ ಪ್ರದೇಶದ ಈ ಜಮೀನು ಸಮುದ್ರ ತೀರದ ಸಮೀಪದಲ್ಲಿದೆ.

ಈ ಆಸ್ತಿ ಖರೀದಿ ಪ್ರಕ್ರಿಯೆ ಮೇ 18 ರಂದು ಅಲಿಬಾಗ್ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. ಜಮೀನು ಖರೀದಿಗೆ 24 ಕೋಟಿ ರೂ. ಪಾವತಿಸಿರುವ ಯಶ್ ಮತ್ತು ರಾಧಿಕಾ ಪಂಡಿತ್, 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ ಹಾಗೂ ಇತರೆ ನೋಂದಣಿ ಶುಲ್ಕಗಳನ್ನೂ ಪಾವತಿಸಿದ್ದಾರೆ. ಇದನ್ನೂ ಓದಿ : ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ..!​

ಕಳೆದ ಕೆಲವು ವರ್ಷಗಳಿಂದ ಅಲಿಬಾಗ್ ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ಹೂಡಿಕೆದಾರರ ನೆಚ್ಚಿನ ತಾಣವಾಗಿ ಬೆಳೆಯುತ್ತಿದೆ. ಮುಂಬೈಗೆ ಸಮೀಪದಲ್ಲಿರುವುದು ಮತ್ತು ಸುಂದರ ಸಮುದ್ರ ತೀರ ಹೊಂದಿರುವ ಕಾರಣ ಇಲ್ಲಿ ಐಷಾರಾಮಿ ಮನೆಗಳು ಹಾಗೂ ಜಮೀನುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹೊಸ ಆಸ್ತಿ ಖರೀದಿಯೊಂದಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಅಲಿಬಾಗ್‌ನಲ್ಲಿ ಹೂಡಿಕೆ ಮಾಡಿದ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

Related posts

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ: ಈಶ್ವರ ಖಂಡ್ರೆ

Kalpana Editor

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ..!

Kalpana Editor

ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿ; ಸಿರಾಜ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಯ್ಕೆ..!

Kalpana Editor