ಟೆಹ್ರಾನ್ : ಹಾರ್ಮುಜ್ ಜಲಸಂಧಿಯ ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡ ಬೆನ್ನಲ್ಲೇ ಅಮೆರಿಕ ಸೇನೆ ಇಂದು (ಬುಧವಾರ) ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಸೇನಾ ಹೆಲಿಕಾಪ್ಟರ್ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ಲಾಮಿಕ್ ಗಣರಾಜ್ಯವನ್ನು ದೂಷಿಸಿದರು. ಈ ಬೆನ್ನಲ್ಲೇ ಯುಎಸ್ ಸೇನೆ ದಾಳಿ ಮಾಡಿದೆ.
ವಾಯು ರಕ್ಷಣಾ, ನೆಲದ ನಿಯಂತ್ರಣ ಕೇಂದ್ರಗಳು ಮತ್ತು ಕಣ್ಗಾವಲು ರಾಡಾರ್ ತಾಣಗಳನ್ನು ಗುರಿಯಾಗಿಸಿಕೊಂಡು ಯುಎಸ್ ವಾಯುಪಡೆ ಮತ್ತು ನೌಕಾಪಡೆಯ ಫೈಟರ್ ಜೆಟ್‌ಗಳು ದಾಳಿ ನಡೆಸಿವೆ ಎಂದು ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಬಂದರ್ ಅಬ್ಬಾಸ್ ಮತ್ತು ಕೆಶ್ಮ್ ದ್ವೀಪದ ಸುತ್ತಲೂ ದಾಳಿಗಳನ್ನು ಇರಾನ್ ಒಪ್ಪಿಕೊಂಡಿದೆ. ಆದರೆ ಹಾನಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ ಎಂದು ತಿಳಿದುಬಂದಿದೆ.
ಅಮೆರಿಕದ ಪಡೆಗಳು ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳಿಗೆ ಪ್ರತ್ಯುತ್ತರವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. ದ್ವೀಪ ಸಾಮ್ರಾಜ್ಯವು ಅಂತಹ ದಾಳಿಯ ಬಗ್ಗೆ ಯಾವುದೇ ಎಚ್ಚರಿಕೆ ನೀಡದಿದ್ದರೂ, ಬಹ್ರೇನ್‌ನಲ್ಲಿರುವ ಯುಎಸ್ ನೌಕಾಪಡೆಯ 5 ನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಡ್ರೋನ್ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ತಿಳಿಸಿದೆ. ಇದನ್ನೂ ಓದಿ : ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ; ಸಚಿವ ಈಶ್ವರ ಖಂಡ್ರೆ
ಹಾರ್ಮುಜ್ ಜಲಸಂಧಿ ಮೇಲೆ ಗಸ್ತು ತಿರುಗುತ್ತಿದ್ದಾಗ ಸೇನಾ ಹೆಲಿಕಾಪ್ಟರ್‌ನ್ನು ಇರಾನ್ ಹೊಡೆದುರುಳಿಸಿದೆ ಎಂದು ಟ್ರಂಪ್ ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಘೋಷಿಸಿದ್ದರು. ಇರಾನ್‌ನ ಉನ್ನತ ರಾಜತಾಂತ್ರಿಕರು, ನಮ್ಮ ಪ್ರದೇಶದ ಸಮೀಪವಿರುವ ವಿದೇಶಿ ಮಿಲಿಟರಿ ಪಡೆಗಳು ನಿರಂತರ ಅಪಾಯದಲ್ಲಿವೆ. ಅಮೆರಿಕದ ಹೊಸ ದಾಳಿಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
