23.6 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿಸಿನಿಮಾ

ಮುರಿದು ಬಿತ್ತು ‘ಗಂಗೆ ಬಾರೆ ತುಂಗೆ ಬಾರೆ’ ನಟಿಯ ನಿಶ್ಚಿತಾರ್ಥ

ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದ, ಸುನೈನಾ ಅವರು ತಮ್ಮ ವೈಯಕ್ತಿಕ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ದುಬೈ ಮೂಲದ ಯೂಟ್ಯೂಬರ್, ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಖಲೀದ್ ಅಲ್ ಅಮೇರಿ ಜೊತೆ ಕಳೆದ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಗುಟ್ಟಾಗಿ ನಡೆದ ನಿಶ್ಚಿತಾರ್ಥ ಈಗ ಮುರಿದು ಬಿದ್ದ, ಬಗ್ಗೆ ವರದಿ ಆಗಿದೆ. ಇದಕ್ಕೆ ನೆಟ್ಟಿಗರು ಬಲವಾದ ಸಾಕ್ಷಿಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ.

ಖಲೀದ್ ಅವರು ಯುಎಇ ಅಲ್ಲಿ ವಾಸ ಮಾಡುತ್ತಾರೆ. ಅವರು ಈ ಮೊದಲು ಸಲಾಮಾ ಮೊಹ್ಮದ್ ಜೊತೆ ಮದುವೆ ಆಗಿದ್ದರು. ಆದರೆ, ಇವರು ಡಿವೋರ್ಸ್ ಪಡೆದಿದ್ದಾರೆ. ಆ ಬಳಿಕ ಖಲೀದ್ ಹಾಗೂ ಸುನೈನಾ ಒಟ್ಟಿಗೆ ಸುತ್ತಾಡಲು ಆರಂಭಿಸಿದ್ದರು. ನಿಶ್ಚಿತಾರ್ಥ ನಡೆದು ವರ್ಷಗಳೇ ಕಳೆದರೂ ಮದುವೆ ವಿಷಯ ಹೊರ ಬಿದ್ದಿಲ್ಲ. ಹೀಗಿರುವಾಗಲೇ ಒಂದು ಪ್ರಮುಖ ಬೆಳವಣಿಗೆ ನಡೆದಿದೆ.

ಯಾರ ಸಂಬಂಧ ಹಾಳಾಗಿದೆ, ಯಾರು ವಿಚ್ಛೇದನ ನೀಡುತ್ತಿದ್ದಾರೆ ಎಂಬುದನ್ನು ತಿಳಿಯುವುದು ಸುಲಭ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿಲ್ಲ ಎಂದರೆ ಇವರ ಮಧ್ಯೆ ಏನೋ ನಡೆಯುತ್ತಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು. ಈ ವಿಷಯ ಈ ಮೊದಲು ಸಾಕಷ್ಟು ಬಾರಿ ನಿಜವಾಗಿದೆ.

ಸುನೈನಾ ಹಾಗೂ ಖಲೀದ್ ಅಮೇರಿ ಪರಸ್ಪರ ಒಬ್ಬರನ್ನೊಬ್ಬರು ಅನ್​​ಫಾಲೋ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಸಿನಿಮಾ ವಿಷಯಕ್ಕೆ ಬರೋದಾದರೆ 2025ರಲ್ಲಿ ರಿಲೀಸ್ ಆದ ‘ಕುಬೇರ’ ಸಿನಿಮಾದಲ್ಲಿ ಸುನೈನಾ ನಟಿಸಿದ್ದರು. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರು ಬ್ರೇಕ್ ಪಡೆದಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ : ಕಿಂಡರ್‌ಗಾರ್ಟನ್‌ನಿಂದ ಪಿಜಿವರೆಗೆ ಉಚಿತ ಶಿಕ್ಷಣ; ಒಡಿಶಾ ಸರ್ಕಾರ ಘೋಷಣೆ..!

Related posts

ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ..!

Kalpana Editor

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ..!

Kalpana Editor

ನಿದ್ರೆ ಕಡಿಮೆಯಾದರೆ, ಮೂಳೆ-ಕೀಲುಗಳಿಗೆ ಆರೋಗ್ಯಕ್ಕೆ ಹಾನಿಕರ..!

kknewskannada1987@gmail.com