ಬಿಡದಿ : ಹಳ್ಳಿಗಳ ರೈತರ ಬದುಕಿನ ಆಧಾರವಾಗಿರುವ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳುವುದು ಸರಿಯಲ್ಲ. ಇದು ಕೇವಲ ರಿಯಲ್ ಎಸ್ಟೇಟ್ ಲಾಭಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ. ಸ್ಥಳೀಯ ಕೃಷಿಕರನ್ನು ಬೀದಿಗೆ ತಳ್ಳುವಂತಿದೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು. ಅರಳಾಳುಸಂದ್ರ ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸಾಕ್ಷ್ಯಾಧಾರ ಸಮೇತ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ಕಣ್ಣು ಕಾಣ್ತಿಲ್ಲ, ಕಿವಿಯೂ ಕೇಳ್ತಿಲ್ಲ. ಭೈರಮಂಗಲ, ಕಂಚುಗಾರನಹಳ್ಳಿ ಭಾಗದಲ್ಲಿ 450ಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆದಿದೆ. ರೈತರು ತಮ್ಮ ಸ್ವಂತ ಜಮೀನಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗುಡುಗಿದರು. ಬಿಡದಿಯ ವಡೇರಹಳ್ಳಿ, ಮಂಡಲಹಳ್ಳಿ, ಕೆಂಪಯ್ಯನಪಾಳ್ಯ ಗ್ರಾಮಗಳನ್ನ ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿರೋ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕು.
ಈ ಭಾಗದಲ್ಲಿ 1 ಎಕರೆ ಭೂಮಿ ಹೊಂದಿರುವ ರೈತರೇ ಹೆಚ್ಚಾಗಿದ್ದಾರೆ. ಶೇ 80% ಜನ ಗರಿಷ್ಠ 1 ಎಕರೆ ಭೂಮಿ ಹೊಂದಿದ್ದಾರೆ. ಕೆಂಪಯ್ಯನಪಾಳ್ಯದಲ್ಲಿ 354 ಎಕರೆ ನೋಟಿಫಿಕೇಷನ್ ಆಗಿದೆ. ಈ ಭಾಗದ 600 ರೈತರಲ್ಲಿ 500 ಜನ ರೈತರು 1 ಎಕರೆಗಿಂತ ಕಮ್ಮಿ ಜಮೀನು ಹೊಂದಿದ್ದಾರೆ ಎಂದು ತಿಳಿಸಿದರು. ಭೈರಮಂಗಲ, ಕಂಚುಗಾರನಹಳ್ಳಿ ಭಾಗದಲ್ಲಿ 450ಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆದಿದೆ. ವೈಯಕ್ತಿಕ ಹಿತಾಶಕ್ತಿಗಾಗಿ ಡಿಕೆ ಶಿವಕುಮಾರ್ ಅವರು ಬುದ್ದಿವಂತರ ರೀತಿ ಅಧಿಸೂಚನೆ ಮಾಡ್ತಿದ್ದಾರೆ ಎಂದು ನಿಖಿಲ್ ಆರೋಪ ಮಾಡ್ತಿದ್ದಾರೆ.
ಕನಕಪುರದಲ್ಲಿ ತಮ್ಮ ಕ್ಷೇತ್ರದ ರೈತರಿಗೆ ‘ಜಮೀನು ಮಾರಬೇಡಿ, ಮುಂದೆ ಒಳ್ಳೆಯ ಬೆಲೆ ಸಿಗುತ್ತದೆ’ ಎನ್ನುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಡದಿಯ ಬಡ ರೈತರ ಭೂಮಿಯನ್ನು ಬಲವಂತವಾಗಿ ಕಸಿಯಲು ಹೊರಟಿದ್ದಾರೆ. ವೈಯಕ್ತಿಕ ಹಿತಾಶಕ್ತಿಗಾಗಿ ಬುದ್ದಿವಂತರ ರೀತಿ ಅಧಿಸೂಚನೆ ಮಾಡ್ತಿದ್ದಾರೆ” ಎಂದು ನಿಖಿಲ್ ಆರೋಪಿಸಿದರು. ರೈತ ಕುಟುಂಬದ ಜೊತೆ ನಿಲ್ಲುವ ಜವಾಬ್ದಾರಿ ನಮ್ಮದು. ಹಾಗಾಗಿ ಈ ಭಾಗದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಸಮಗ್ರ ಅಭಿವೃದ್ಧಿ ಮಾಡ್ತೀವಿ ಅಂದಿದ್ರು. ಈಗ 3 ಗ್ರಾಮಗಳಿಗೆ ಅಧಿಸೂಚನೆ ಮಾಡಿದ್ದಾರೆ. ಇದನ್ನೂನ ಓದಿ : ಇಂದು ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ರಿಯಲ್ ಎಸ್ಟೇಟ್ ದಂಧೆ – ರಿಯಲ್ ಎಸ್ಟೇಟ್ ದಂಧೆ ಮಾಡೋದಕ್ಕೆ ರೈತರ ಜಮೀನು ವಶಪಡಿಸಿಕೊಳ್ತಿದ್ದಾರೆ. ಸರ್ಕಾರದ ವರದಿಯಲ್ಲೇ ಇದು ಇದೆ. ರೈತರಿಗೆ ಒಂದು ಎಕರೆಗೆ 2.5 ಕೋಟಿ ಕೊಡ್ತಿದ್ದಾರೆ. ಆದರೆ ಇದನ್ನ ಬಿಡಿಬಿಡಿಯಾಗಿ ಮಾರಾಟ ಮಾಡಿ ಎಕರೆಗೆ 25 ಕೋಟಿಯಷ್ಟು ಲಾಭ ಪಡೆಯುತ್ತೀರಿ. ಈ ಯೋಜನೆಯಿಂದ 33 ಸಾವಿರ ಕೋಟಿ ಲಾಭ ಮಾಡಲು ಸರ್ಕಾರ ಹೊರಟಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಆರ್ಥಿಕ ಇಲಾಖೆ ಇದಕ್ಕೆ ಒಪ್ಪಿಗೆ ನೀಡದಿದ್ರೂ ಯೋಜನೆ ಮುಂದುವರೆಸುತ್ತಿದ್ದೀರಿ. ಈ ಯೋಜನೆ ಸರ್ಕಾರಕ್ಕೆ ಹೊರೆ ಅಂತ ಅಧಿಕಾರಿಗಳೇ ಹೇಳ್ತಿದ್ದಾರೆ. ಹುಡ್ಕೊ ದಿಂದ ಸಾಲ ಪಡೆಯಲು ನಿಮ್ಮ ಜಮೀನುಗಳನ್ನೇ ಅಡ ಇಡಬೇಕು. ಸರ್ಕಾರ 33 ಕೋಟಿ ಲಾಭ ಮಾಡಲು ರೈತರ ಭೂಮಿ ಬೇಕಾ.? ಎಂದು ವಾಗ್ದಾಳಿ ನಡೆಸಿದರು. ರೈತರ ಹೆಸರಲ್ಲಿ 1 ಸಾವಿರ ಕೋಟಿ ಲಾಭ ಮಾಡಿದ್ರೂ ಅಚ್ಚರಿ ಇಲ್ಲ. ಯಾರ ಉದ್ದಾರಕ್ಕಾಗಿ ಈ ಯೋಜನೆ ಮಾಡ್ತಿದ್ದೀರಿ.? ದುಡ್ಡೇ ಇಲ್ಲದೇ ಯೋಜನೆ ಮಾಡುವ ಅವಶ್ಯಕತೆ ಇದೆಯಾ? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಬೃಹತ್ ಹೋರಾಟದ ಎಚ್ಚರಿಕೆ – ಡಿಕೆಶಿ ಇತ್ತೀಚೆಗೆ ಡಿಸಿಎಂ ನಿಂದ ಸಿಎಂ ಆಗಿದ್ದಾರೆ. ನಮ್ಮ ಜಿಲ್ಲೆಯವರು ಅನ್ನೋ ಕಾರಣಕ್ಕೆ ನಾವೂ ಅಭಿನಂದನೆ ಸಲ್ಲಿಸಿದ್ದೇವೆ. ಆದರೆ ಈ ಯೋಜನೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡೋದು ಯಾಕೆ? ಇದಕ್ಕೆ ನಾವು ಬಿಡಲ್ಲ. ಬೃಹತ್ ಪಾದಾಯಾತ್ರೆ ಮೂಲಕ ಬೃಹತ್ ಹೋರಾಟ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕೋದಾಗಿ ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ. ಮಂಜುನಾಥ್, ಜಿಲ್ಲಾಧ್ಯಕ್ಷರಾದ ಜಯಮುತ್ತು, ತಾಲ್ಲೂಕು ಅಧ್ಯಕ್ಷರಾದ ಶಸಬ್ಬಕೆರೆ ಶಿವಲಿಂಗಪ್ಪ ಹಾಗೂ ನೂರಾರು ರೈತ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ : ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ..!
