26.4 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜ್ಯ

ಮಾನ ಹರಾಜು ಹಾಕಿದ ಬೆಂಗಳೂರು ಪೊಲೀಸರು; PSI ಸೇರಿ ಮೂವರ ಅರೆಸ್ಟ್‌…!

ಬೆಂಗಳೂರು : ನ್ಯಾಯ ಕೊಡಿಸುವಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್. ಆದರೆ ಬೆಂಗಳೂರಿನ ಮೂವರು ಪೊಲೀಸರು ಜೈಪುರದಲ್ಲಿ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ‌ಯನ್ನು ಬಂಧಿಸಲು ಹೋಗಿದ್ದವರು ಲಂಚ ಸ್ವೀಕರಿಸುತ್ತಿದ್ದಾಗ ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾರೆ.

ದೊಡ್ಡ ದೊಡ್ಡ ಪ್ರಕರಣದಲ್ಲಿ ಸುಮ್ಮನಾಗುವ ಪೊಲೀಸರು ವರದಕ್ಷಿಣೆ ಪ್ರಕರಣದಲ್ಲಿ ರಾಜಸ್ಥಾನಕ್ಕೆ ಹೋಗಿದ್ದರು. ಆರೋಪಿಯನ್ನ ಬಂಧಿಸಿ ಕರೆದುಕೊಂಡು ಬರುವುದನ್ನು ಬಿಟ್ಟು ಹಣ ಮಾಡಲು ಮುಂದಾಗಿದ್ದರು. ಆರೋಪಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಆರೋಪಿ ಇದನ್ನು ಬಂಡವಾಳ ಮಾಡಿಕೊಂಡು ಜೈಪುರ್ ಎಸಿಬಿಗೆ ದೂರು ನೀಡಿದ್ದಾನೆ. ದೂರಿನ‌ ಮೇಲೆ ಕಾರ್ಯಾಚರಣೆ ನಡೆಸಿದ ಎಸಿಬಿ ರಾಜ್ಯದ ಪಿಎಸ್​​ಐ ಸೇರಿ ಮೂವರನ್ನು ಬಂಧಿಸಿದ್ದಾರೆ.

ವರದಕ್ಷಿಣೆ ಪ್ರಕರಣದ ತನಿಖೆಗಾಗಿ ಹೆಚ್​ಎಎಲ್ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್ ಅನಿತಾ, ಕಾನ್ಸ್‌ಟೇಬಲ್​​ ಯತೀಶ್ ಕುಮಾರ್, ಉಳ್ವಪ್ಪ ತೆರಳಿದ್ದರು‌. ಆರೋಪಿಯನ್ನು ಬಂಧಿಸಿದ ಇವರು ದುಡ್ಡು ಕೊಟ್ಟರೆ ಬಿಡುವುದಾಗಿ ಹೇಳಿದ್ದಾರೆ. ಪ್ರಕರಣದಲ್ಲಿ ನೆರವು ನೀಡುವುದಾಗಿ ಹೇಳಿ 2 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ : ವಿಮಾನ ಪತನ; ಓರ್ವ ಪೈಲಟ್‌, 11 ಸ್ಕೈಡೈವರ್‌ಗಳು ಸಾವು..!

ಬೆಂಗಳೂರು ಪೊಲೀಸರ ವಸೂಲಿ ಬಾಜಿಯಿಂದ ಬೇಸತ್ತ ಆರೋಪಿ, ತಕ್ಷಣ ಜೈಪುರ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದ. ದೂರು ಸ್ವೀಕರಿಸಿದ ರಾಜಸ್ಥಾನ ಎಸಿಬಿ ಟೀಂ, ಪ್ರಾಥಮಿಕ ತನಿಖೆ ನಡೆಸಿ ಬೆಂಗಳೂರು ಪೊಲೀಸರಿಗೆ ಬಲೆ ಬೀಸಿತ್ತು. ಜೈಪುರದ ಗಂಗೌರ್ ಹೋಟೆಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಎಸ್​​ಐ ಅನಿತಾ ಸೇರಿ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.

ಡಿಐಜಿ ಓಂ ಪ್ರಕಾಶ್ ಮೀನಾ ಅವರ ಮೇಲ್ವಿಚಾರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನ ವಶಕ್ಕೆ ಪಡೆಯಲಾಗಿದೆ. ಇಡೀ ದೇಶದಲ್ಲಿ ಬೆಂಗಳೂರು ಪೊಲೀಸರ ಗೌರವ 40 ಸಾವಿರ ರೂ.ಕ್ಕೆ ಹರಾಜಾಗಿದೆ‌. ಇನ್ನಾದ್ರೂ ಪೊಲೀಸ್ ಇಲಾಖೆ ಆರೋಪಿಗಳ ಬಳಿ ಕೈ ಒಡ್ಡೋದನ್ನ ನಿಲ್ಲಿಸಬೇಕಿದೆ. ಸದ್ಯ ಮೂವರು ಪೊಲೀಸರನ್ನು ಬಂಧಿಸಿರುವ ಜೈಪುರ ಎಸಿಬಿ ಟೀಂ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

Related posts

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ: ಈಶ್ವರ ಖಂಡ್ರೆ

Kalpana Editor

ರಂಗಭೂಮಿ ಕಲಾವಿದ ನಟ ವಿಜಯ್ ಕುಮಾರ್ ಜಿತ್ತೂರಿ ನಿಧನ..!

kknewskannada1987@gmail.com

ಟೆಸ್ಟ್ ಡ್ರೈವ್ ವೇಳೆ ನಿಯಂತ್ರಣ ತಪ್ಪಿದ ಕಾರು; ವಿದ್ಯುತ್‌ ಕಂಬಕ್ಕೆ ಡಿಕ್ಕಿ, ತಪ್ಪಿದ ಅನಾಹುತ..!

Kalpana Editor