26.5 C
ಬೆಂಗಳೂರು
October 8, 2026
kranthikidi.com
ತಾಜಾಸುದ್ದಿಸಿನಿಮಾ

ರಂಗಭೂಮಿ ಕಲಾವಿದ ನಟ ವಿಜಯ್ ಕುಮಾರ್ ಜಿತ್ತೂರಿ ನಿಧನ..!

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಖ್ಯಾತ ಹಿರಿಯ ಕಲಾವಿದ ವಿಜಯಕುಮಾರ್ ಜಿತೂರಿ ನಿಧನ ಹೊಂದಿದ್ದಾರೆ. ಸೋಮವಾರ (ಆಗಸ್ಟ್ 10) ಸಂಜೆ ಹುಟ್ಟೂರಾದ ಗದಗದಲ್ಲಿ ಅವರು ನಿಧನ ಹೊಂದಿದ್ದಾರೆ. ಕಿರುತೆರೆ ಜೊತೆಗೆ ಹಿರಿತೆರೆ, ರಂಗಭೂಮಿಯಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.

ವಿಜಯಕುಮಾರ್ ಜಿತೂರಿ ಅವರು ಕೇವಲ ನಟ ಮಾತ್ರ ಅಲ್ಲ ಗಾಯಕ ಕೂಡ ಹೌದು. ಅವರು ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಗದಗದ ಬೆಟಗೇರಿಯಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಸೋಮವಾರ ಉಸಿರಾಟದ ತೊಂದರೆ ಕಾಣಸಿಕೊಂಡಿತ್ತು.

ವಿಜಯಕುಮಾರ್ ಜಿತೂರಿ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದ ಜೊತೆ ಒಡನಾಟ ಹೊಂದಿದ್ದರು. ಅವರು ಗಗನ್ ಚಿನ್ನಪ್ಪ ಅಭಿನಯದ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಕಾನ್​​ಸ್ಟೇಬಲ್ ಪಾತ್ರ ಮಾಡಿದ್ದರು. ಗಗನ್ ಚಿನ್ನಪ್ಪ ಜೊತೆ ಅವರು ಆ ಧಾರಾವಾಹಿಯಲ್ಲಿ ಸಾಕಷ್ಟು ಕಾಣಿಸಿಕೊಂಡಿದ್ದರು.

ಅವರು ಇಷ್ಟೆಲ್ಲ ಧಾರಾವಾಹಿಗಳಲ್ಲಿ ನಟಿಸಿದ ಹೊರತಾಗಿಯೂ ಆರ್ಥಿಕ ಸಂಕಷ್ಟ ಬಹುವಾಗಿ ಕಾಡುತ್ತಾ ಇತ್ತು. ಅವರಿಗೆ ಇತ್ತೀಚೆಗೆ ಹೆಚ್ಚಿನ ಅವಕಾಶಗಳು ಬಂದಿರಲಿಲ್ಲ. ಈ ಕಾರಣದಿಂದ ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದೇ ಹುಟ್ಟೂರಿಗೆ ತೆರಳಿದ್ದರು. ಈಗ ಅವರು ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ : ಎಸ್​​ಐಆರ್ ಶಾಕ್; ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಡಿಲೀಟ್..!

Related posts

ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ; ಸಂಧ್ಯಾ ನಾಗರಾಜ್ ವಿರುದ್ಧ ದೂರು..!

Kalpana Editor

ಡ್ರಗ್ಸ್ ಜಾಲದೊಂದಿಗೆ ಪೊಲೀಸ್ ಇಲಾಖೆ ಶಾಮೀಲು – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತಿದೆ; ಬಸವರಾಜ ಬೊಮ್ಮಾಯಿ ಆಕ್ರೋಶ..!

Kalpana Editor

ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ; ಆರೋಪಿ ಪುಣ್ಯೇಶ್ ಅರೆಸ್ಟ್‌..!

Kalpana Editor