20.8 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿದೇಶಸಿನಿಮಾ

‘ಕುಂಕುಮ ಭಾಗ್ಯ’ ಹಿಂದಿ ನಟಿ ಸಂಚಿತಾ ಉಗಲೆ ನೇಣಿಗೆ ಶರಣು

ಮುಂಬೈ : ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೆನ್ನೆ (ಭಾನುವಾರ) ಸಂಜೆ ಸುಮಾರು 5:30ರ ವೇಳೆಗೆ ಸಂಚಿತಾ ಅವರ ಸಹೋದರಿ ಅಂಜಲಿ ಮನೆಯಿಂದ ಹೊರಗೆ ಹೋಗಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನಟಿ ಸಂಚಿತಾ ಅವರು ತಮ್ಮ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂಡಲೇ ಅವರನ್ನು ತುಲಿಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಸದ್ಯ ಅಚೋಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 194 ರ ಅಡಿಯಲ್ಲಿ ಅಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸಂಚಿತಾ ಹಿಂದಿಯ ದಿಲ್‌ವಾಲಿ ದುಲ್ಹಾ ಲೇ ಜಾಯೇಗಿ ಧಾರಾವಾಹಿಯಲ್ಲಿ ಸುಕೂನ್ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು. ಇದರೊಂದಿಗೆ ಅವರು ಛಾವಾ ಚಿತ್ರದಲ್ಲಿ ತಾರಾಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತ ಕುಂಕುಮ ಭಾಗ್ಯ ಮತ್ತು ವಾಗ್ಲೆ ಕಿ ದುನಿಯಾ ಎನ್ನುವ ಸೀರಿಸ್‌ಗಳಲ್ಲೂ ಕೂಡ ನಟಿಸಿ ಜನಪ್ರಿಯತೆ ಗಳಿಸಿದ್ದರು. ಇದನ್ನೂ ಓದಿ : ಸಿಎಂ ವಿಜಯ್ ವಿಚ್ಛೇದನ ಕೇಸ್‌; ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

Related posts

ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭಿಸುತ್ತೇವೆ – ಸಿಎಂ ಡಿಕೆಶಿ

Kalpana Editor

ಡ್ಯೂಟಿಯಲ್ಲಿರುವಾಗಲೇ ಹೃದಯಾಘಾತ; ಪೊಲೀಸ್ ಕಾನ್ಸ್‌ಟೇಬಲ್ ಸಾವು..!

Kalpana Editor

ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ಹುದ್ದೆಗಳಿಗೆ ಅರ್ಜಿ ಆಹ್ವಾನ..!

Kalpana Editor